ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಮೀಸಲಾತಿ ಮಸೂದೆ ಬೆಂಬಲಿಸಿದ್ದೇವೆ: ಶರದ್‌ ಪವಾರ್‌

Published 26 ಸೆಪ್ಟೆಂಬರ್ 2023, 14:47 IST
Last Updated 26 ಸೆಪ್ಟೆಂಬರ್ 2023, 14:47 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): 'ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ಸಂಸತ್ತಿನಲ್ಲಿ ಹೃದಯಪೂರ್ವಕವಾಗಿ ಬೆಂಬಲಿಸಿವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಸರಿಯಾಗಿ ವಿವರಿಸಿಲ್ಲ' ಎಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಮಂಗಳವಾರ ಹೇಳಿದರು.

‘ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿದ್ದ ಹಿಂದಿನ ಕಾಂಗ್ರೆಸ್‌ ಸರ್ಕಾರಗಳು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದ್ದವು‘ ಎಂದು ಅವರು ತಿಳಿಸಿದರು.

‘ಘಮಂಡಿಯಾ’ ಕೂಟದಲ್ಲಿರುವ ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆಯನ್ನು ಒಲ್ಲದ ಮನಸ್ಸಿನಿಂದ ಬೆಂಬಲಿಸಿದವು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರದೇಶದಲ್ಲಿ ಹೇಳಿದ ಮರು ದಿನ ಶರದ್‌ ಪವಾರ್‌ ಅವರ ಪ್ರತಿಕ್ರಿಯೆ ಬಂದಿದೆ.

‘ಈ ಕುರಿತು ಪ್ರಧಾನಿ ಅವರು ಹೇಳಿರುವುದು ಸರಿಯಲ್ಲ. ನಾವೆಲ್ಲ ಹೃತ್ಪೂರ್ವಕವಾಗಿ ಮಹಿಳಾ ಮೀಸಲು ಮಸೂದೆಯನ್ನು ಬೆಂಬಲಿಸಿದ್ದೇವೆ. ಆದರೆ ಇದನ್ನು ಪ್ರಧಾನಿ ಅವರು ಸರಿಯಾಗಿ ತಿಳಿಸಿಲ್ಲ’ ಎಂದು ಪವಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮಹಾರಾಷ್ಟ್ರದಲ್ಲಿ ನನ್ನ ನೇತೃತ್ವದಲ್ಲಿ ಇದ್ದ ಕಾಂಗ್ರೆಸ್‌ ಸರ್ಕಾರವು 1994ರ ಜೂನ್‌ 24ರಂದು ದೇಶದ ಮೊದಲ ಮಹಿಳಾ ನೀತಿಯನ್ನು ಅನಾವರಣಗೊಳಿಸಿತ್ತು’ ಎಂದು ಅವರು ಹೇಳಿದರು.

‘ಹಾಗೆಯೇ, ಕೇಂದ್ರದಲ್ಲಿದ್ದ ಕಾಂಗ್ರೆಸ್‌ ಸರ್ಕಾರವು ಸಂವಿಧಾನಕ್ಕೆ 73ನೇ ತಿದ್ದುಪಡಿ ಮಾಡಿತ್ತು. ಅದು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿಗೆ ದಾರಿ ಮಾಡಿಕೊಟ್ಟಿತು’ ಎಂದು ಎನ್‌ಸಿಪಿ ಅಧ್ಯಕ್ಷ ತಿಳಿಸಿದರು.

‘ನಾನು ರಕ್ಷಣಾ ಸಚಿವನಾಗಿದ್ದಾಗ ಸೇನೆ, ವಾಯು ಮತ್ತು ನೌಕಾಪಡೆಯಲ್ಲಿ ಮಹಿಳೆಯರಿಗೆ ಶೇ 11ರಷ್ಟು ಮೀಸಲಾತಿ ಒದಗಿಸಲಾಗಿತ್ತು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT