ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ಪ್ರಕರಣ: ಪ್ರಧಾನಿ ಮೌನವೇಕೆ –ಕಾಂಗ್ರೆಸ್‌ ಪ್ರಶ್ನೆ

Last Updated 6 ಫೆಬ್ರುವರಿ 2023, 14:16 IST
ಅಕ್ಷರ ಗಾತ್ರ

ನವದೆಹಲಿ : ಅದಾನಿ ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರು ಮೌನ ತಳೆದಿರುವುದೇಕೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ಇದು ತನ್ನ ಆಪ್ತರಿಗೆ ನೆರವಾಗಲು ‘ಮನ್‌ ಕೀ ಬ್ಯಾಂಕಿಂಗ್‌’ಗೆ ನಿದರ್ಶನವೇ ಎಂದು ವ್ಯಂಗ್ಯವಾಡಿದೆ.

‘ಇನ್ನಾದರೂ ಮೌನ ಮುರಿಯಿರಿ ಪ್ರಧಾನಿಗಳೇ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಹೇಳಿದ್ದಾರೆ. ಭಾನುವಾರದಿಂದ ಸಂಬಂಧ ನಿತ್ಯ ಪ್ರಶ್ನೆಗಳನ್ನು ಕೇಳಲಾಗುವುದು ಎಂದು ಹೇಳಿದ್ದೆವು. ಸೋಮವಾರದ ಪ್ರಶ್ನೆ ಹೀಗಿದೆ. ‘ಹಮ್‌ ಅದಾನಿ ಕೇ ಹೈ ಕೌನ್‌. ದಯವಿಟ್ಟು ಮಾತನಾಡಿ’ ಎಂದಿದ್ದಾರೆ.

ಐಡಿಬಿಐ ಬ್ಯಾಂಕ್‌, ನ್ಯೂ ಇಂಡಿಯಾ ಅಶ್ಯೂರೆನ್ಸ್‌, ಜನರಲ್‌ ಇನ್ಸೂರೆನ್ಸ್ ಕಾರ್ಪೋರೇಷನ್‌ನ ಬಂಡವಾಳ ಹಿಂತೆಗೆತ ವಿಫಲವಾದ ಬಳಿಕ ಎಲ್ಐಸಿ ನಿಧಿಯನ್ನು ಬಳಸಿಕೊಂಡು ಅದನ್ನು ಮರೆಮಾಚುವ ದಾಖಲೆಯೇ ಸರ್ಕಾರದ ಬೆನ್ನಿಗಿದೆ. ಹಾಗೇ 30 ಕೋಟಿ ಪಾಲಿಸಿದಾರರ ಮೊತ್ತವನ್ನು ಬಳಸಿಕೊಂಡು ನಿಮ್ಮ ಗೆಳೆಯರನ್ನು ಸಿರಿವಂತರಾಗಿಸುವ ಕಾರ್ಯಕ್ರಮವೇ? ಅಪಾಯ ಸಾಧ್ಯತೆ ಇದ್ದ ಅದಾನಿ ಸಮೂಹದಲ್ಲಿ ಎಲ್‌ಐಸಿ ಇಷ್ಟು ದೊಡ್ಡ ಪ್ರಮಾಣದ ಹೂಡಿಕೆ ಮಾಡುವುದು ಹೇಗೆ ಸಾಧ್ಯವಾಯಿತು ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT