ಅಹಮದಾಬಾದ್: ಕಾಂಗ್ರೆಸ್ ಪಕ್ಷವು ಮತ್ತೆ ಅಧಿಕಾರಕ್ಕೆ ಹಿಂದಿರುಗಲು ಹಿಂದುಳಿದ ವರ್ಗ (ಒಬಿಸಿ) ಮತ್ತು ಮಹಿಳೆಯರ ಬೆಂಬಲವನ್ನು ಮರಳಿ ಗಳಿಸುವಂತೆ ಪಕ್ಷದ ನಾಯಕರಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಇಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷವು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಬೆಂಬಲವನ್ನು ಹೊಂದಿದೆ . ಆದರೆ ಬಡ ವರ್ಗಗಳು ಸೇರಿದಂತೆ ಜನಸಂಖ್ಯೆಯ ಸುಮಾರು ಶೇ 50ರಷ್ಟಿರುವ ಇತರೆ ಹಿಂದುಳಿದ ವರ್ಗಗಳ ವಿಶ್ವಾಸವನ್ನು ಮರಳಿ ಗಳಿಸುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.
.IPL 2021 | CSK vs PBKS: ರಾಹುಲ್ ಅಜೇಯ 98; ಚೆನ್ನೈ ವಿರುದ್ಧ ಪಂಜಾಬ್ಗೆ ಭರ್ಜರಿ ಗೆಲುವು.ಹುಬ್ಬಳ್ಳಿಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ?: ಸಚಿವ ಎಂ.ಬಿ.ಪಾಟೀಲ.
ಜನಸಂಖ್ಯೆಯ ಸುಮಾರು ಅರ್ಧದಷ್ಟು ಪಾಲು ಹೊಂದಿರುವ ಮಹಿಳಾ ಮತದಾರರ ಬೆಂಬಲವನ್ನು ಗಳಿಸುವತ್ತ ಗಮನಹರಿಸಬೇಕೆಂದು ರಾಹುಲ್ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ.

ಈ ವಿಷಯದಲ್ಲಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಸಾಮರ್ಥ್ಯ ಕಾಂಗ್ರೆಸ್ಗೆ ಇದೆ ಎಂದು ರಾಹುಲ್ ಪುನರುಚ್ಚರಿಸಿದ್ದಾರೆ.

ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಮೀಸಲಾತಿಯ ಮೇಲಿನ ಶೇ 50 ರಷ್ಟು ಮಿತಿಯನ್ನು ಹೆಚ್ಚಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಸಮಾಜದಲ್ಲಿ ಎಲ್ಲರಿಗೂ ಸಮಾನ ನ್ಯಾಯ ಒದಗಿಸಲು ದೇಶದಾದ್ಯಂತ ಜಾತಿ ಜನಗಣತಿಗೆ ಕಾಂಗ್ರೆಸ್ ಒತ್ತಾಯಿಸಿದೆ.
.ಆರ್ಥಿಕತೆಯಲ್ಲಿ ನಿರೀಕ್ಷಿತ ಪ್ರಗತಿ: ವಿತ್ತ ಸಚಿವೆ ನಿರ್ಮಲಾ ವಿಶ್ವಾಸ .IPL ಬೆಟ್ಟಿಂಗ್ ಕುರಿತು ಸ್ಟೇಟಸ್: ‘ರೀಲ್ಸ್ ಸ್ಟಾರ್’ಗಳಿಗೆ ಪೊಲೀಸರ ಎಚ್ಚರಿಕೆ.ಬೆಳಾಲು: ಕಾಡಿನಲ್ಲಿ ಪತ್ತೆಯಾಗಿದ್ದ ಮಗುವಿನ ತಂದೆ-ತಾಯಿ ವಿವಾಹ .ವಕ್ಫ್ ತಿದ್ದುಪಡಿ ಕಾಯ್ದೆ: ಕೇಂದ್ರದಿಂದ ಸುಪ್ರೀಂ ಕೋರ್ಟ್ಗೆ ಕೇವಿಯಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.