ನವದೆಹಲಿ: ಗ್ರಾಹಕರ ವ್ಯಾಜ್ಯಗಳ ಇತ್ಯರ್ಥಕ್ಕೆ ಖಾಯಂ ವೇದಿಕೆ ರಚಿಸುವ ಕುರಿತು ಮೂರು ತಿಂಗಳ ಒಳಗಾಗಿ ಸಾಧ್ಯತಾ ವರದಿ ಸಲ್ಲಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶಿಸಿದೆ.

‘ಗ್ರಾಹಕರ ಹಿತರಕ್ಷಣೆ ಎಂಬುದು ಸಂವಿಧಾನದಲ್ಲಿ ಅಂತರ್ಗತವಾಗಿದೆ. ಗ್ರಾಹಕರ ವ್ಯಾಜ್ಯಗಳ ಇತ್ಯರ್ಥಗೊಳಿಸುವ ವೇದಿಕೆಯ ಅಧ್ಯಕ್ಷ ಹಾಗೂ ಸದಸ್ಯರಿಗೆ ಅಗತ್ಯವಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನೇಮಕ ಮಾಡಲು ಯಾವುದೇ ಕಾರಣಗಳು ಬೇಕಿಲ್ಲ’ ಎಂದು ನ್ಯಾ. ಅಭಯ್ ಎಸ್. ಒಕಾ ಮತ್ತು ನ್ಯಾ. ಎಂ.ಎಂ.ಸುಂದ್ರೇಶ್ ಅವರಿದ್ದ ವಿಭಾಗೀಯ ಪೀಠವು ಅಭಿಪ್ರಾಯಪಟ್ಟಿತು.

‘ಗ್ರಾಹಕರ ವ್ಯಾಜ್ಯ ಇತ್ಯರ್ಥಕ್ಕಾಗಿ ಗ್ರಾಹಕರ ನ್ಯಾಯಮಂಡಳಿ ಅಥವಾ ಗ್ರಾಹಕರ ನ್ಯಾಯಾಲಯ ಮಾದರಿಯಲ್ಲಿ ವೇದಿಕೆ ರಚಿಸುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು. ಇದರ ಸಾಧ್ಯತೆ ಕುರಿತು ಮೂರು ತಿಂಗಳ ಒಳಗಾಗಿ ಪ್ರಮಾಣಪತ್ರ ಸಲ್ಲಿಸಬೇಕು’ ಎಂದಿತು.

‘ಇಂಥ ವೇದಿಕೆಯಲ್ಲಿ ಖಾಯಂ ಸದಸ್ಯರು, ಸಿಬ್ಬಂದಿ ಮತ್ತು ಅಧಿಕಾರಿಗಳು ಇರಬೇಕು. ಹಾಲಿ ನ್ಯಾಯಾಧೀಶರೂ ಪ್ರಕರಣದ ವಿಚಾರಣೆ ನಡೆಸುವಂತಹ ವ್ಯವಸ್ಥೆಯೂ ಆಗಬಹುದು. ಹಂತಹಂತವಾಗಿ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಬಹುದು. ಇದರ ಮೂಲಕ ಗ್ರಾಹಕರಿಗೆ ಸೂಕ್ತ ಪರಿಹಾರವು ಕಾಲಮಿತಿಯೊಳಗೆ ಸಿಗುವಂತ ವ್ಯವಸ್ಥೆ ನಿರ್ಮಾಣವಾಗಬೇಕು’ ಎಂದು ಪೀಠ ಅಭಿಪ್ರಾಯಪಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.