ನವದೆಹಲಿ: ಸಂಸತ್ತಿನ ಈ ಮುಂಗಾರ ಅಧಿವೇಶನದಲ್ಲಿ ನಾವು ಕೋವಿಡ್ ಕುರಿತಂತೆ ಆರೋಗ್ಯಕರ ಮತ್ತು ಫಲಪ್ರದ ಚರ್ಚೆ ನಡೆಸಬೇಕಾದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸೋಮವಾರ ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್ತಿನ ಆವರಣದಲ್ಲಿ ಮಾಧ್ಯಮಗಳೊಂದಿಗೆನರೇಂದ್ರ ಮೋದಿ ಅವರು ಮಾತನಾಡಿದರು.

ಕೋವಿಡ್ ಲಸಿಕೆಯನ್ನು ನಮ್ಮ ಬಾಹು(ತೋಳು)ಗಳಿಗೆ ನೀಡಲಾಗಿದೆ. ಆದ್ದರಿಂದ ಲಸಿಕೆ ಪಡೆದುಕೊಂಡವರು ಈಗ ಬಾಹುಬಲಿಗಳಾಗಿದ್ದಾರೆ. ದೇಶದಲ್ಲಿ ಒಟ್ಟು 40 ಕೋಟಿ ಜನರು ಬಾಹುಬಲಿಗಳಾಗಿದ್ದಾರೆ. ಇದರಿಂದಾಗಿ ಲಸಿಕೆ ಪಡೆದವರು ಸೋಂಕಿನ ವಿರುದ್ಧ ಹೋರಾಡಲು ಸನ್ನದ್ದರಾಗಿದ್ದಾರೆ ಎಂದು ಮೋದಿ ಹೇಳಿದರು.

ಕೋವಿಡ್ ಸೋಂಕು ಇಡೀ ಜಗತ್ತಿಗೆ ವ್ಯಾಪಿಸಿದೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಈ ಅಧಿವೇಶನದಲ್ಲಿ ಕೋವಿಡ್ ಕುರಿತಂತೆ ಕಠಿಣ ಪ್ರಶ್ನೆಗಳನ್ನು ಕೇಳಬೇಕು ಹಾಗೇ ಸರ್ಕಾರಕ್ಕೆ ಉತ್ತರ ನೀಡಲು ಅವಕಾಶ ಮಾಡಿಕೊಡಬೇಕು ಎಂದರು.

ವಿವಿಧ ವಿಷಯಗಳ ಕುರಿತು ಆರೋಗ್ಯಕರ ಮತ್ತು ಫಲಪ್ರದ ಚರ್ಚೆಗಳಿಗೆ ತಮ್ಮ ಸರ್ಕಾರ ಸಿದ್ಧವಿದೆ.ಈ ಮೂಲಕ ಸಂಸತ್ತಿನಲ್ಲಿ ಶಿಸ್ತುಬದ್ಧ ವಾತಾವರಣ ಕಾಪಾಡಿಕೊಳ್ಳಬೇಕಿದೆ. ಆಗಾಗಿ ವಿರೋಧ ಪಕ್ಷಗಳು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.