ನವದೆಹಲಿ: ಮಹಾರಾಷ್ಟ್ರ ಸರ್ಕಾರದ ಮನವಿ ಮೇರೆಗೆ ರೈಲ್ವೆ ಸಚಿವಾಲಯವು ಕ್ರಯೋಜೆನಿಕ್ ಟ್ಯಾಂಕರ್‌ಗಳ ಮೂಲಕ ‘ವೈದ್ಯಕೀಯ ಆಮ್ಲಜನಕ‘ವನ್ನು ಸಾಗಿಸುವಂತಹ ಹೊಸ ನೀತಿಯನ್ನು ರೂಪಿಸಿದೆ.

ಶುಕ್ರವಾರ ತಡರಾತ್ರಿ ಈ ನೀತಿಯನ್ನು ಸುತ್ತೋಲೆಯ ಮೂಲಕ ಪ್ರಕಟಿಸಲಾಗಿದ್ದು, ಇದರ ಪ್ರಕಾರ ಕ್ರಯೋಜೆನಿಕ್ ಟ್ಯಾಂಕರ್‌ಗಳನ್ನು ರೋಲ್ ಆನ್-ರೋಲ್ ಆಫ್ (ರೋ-ರೋ) ಸೇವೆ ಮೂಲಕ ದೇಶದಲ್ಲಿರುವ ವಿವಿಧ ರಾಜ್ಯಗಳಿಗೆ ಸಾಗಿಸಲಾಗುವುದು ಎಂದು ಹೇಳಿದೆ.

ಕ್ರಯೋಜೆನಿಕ್ ಟ್ಯಾಂಕರ್‌ಗಳಲ್ಲಿ ವೈದ್ಯಕೀಯ ಆಮ್ಲಜನಕವನ್ನು ಸಾಗಿಸಲು ಮಹಾರಾಷ್ಟ್ರದ ಆರೋಗ್ಯ ಇಲಾಖೆ ಕಾರ್ಯದರ್ಶಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ನೀತಿ ರೂಪಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

‘ಕಾರ್ಯದರ್ಶಿಯವರ ಮನವಿಯನ್ನು ಪರಿಗಣಿಸಿ, ಕ್ರಯೋಜಿನಿಕ್ ಟ್ಯಾಂಕರ್‌ಗಳಲ್ಲಿ ವೈದ್ಯಕೀಯ ಆಮ್ಲಜನಕವನ್ನು ಸಾಗಿಸಲು ಸಂಬಂಧಿಸಿದ ಪ್ರಾಧಿಕಾರವು ಅನುಮೋದನೆ ನೀಡಿದೆ‘ ಎಂದು ಇಲಾಖೆ ತಿಳಿಸಿದೆ. ಈ ಸೇವೆಗೆ ವಿಧಿಸಬೇಕಾದ ಶುಲ್ಕವನ್ನು ತಿಳಿಸಲಾಗುತ್ತದೆ ಎಂದು ಸಚಿವಾಲಯದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

‘ವೈದ್ಯಕೀಯ ಆಮ್ಲಜನಕ ತುಂಬಿದ ಟ್ರಕ್‌ಗಳನ್ನು ರೋ ರೋ ಸೇವೆಯ ರೈಲುಗಳಿಗೆ ಲೋಡ್ ಮಾಡಲಾಗುವುದು. ಪ್ರತಿ ಟ್ಯಾಂಕರ್‌ನೊಂದಿಗೆ ಇಬ್ಬರು ಸಿಬ್ಬಂದಿ ತೆರಳಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಸಿಬ್ಬಂದಿ ಪ್ರಯಾಣಕ್ಕೆ ದ್ವಿತೀಯ ದರ್ಜೆ ಪ್ರಯಾಣದ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ‘ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.