ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಒಬ್ಬ ಪ್ರಯಾಣಿಕನಿಗೆ 2 ಆಸನ ಕಾಯ್ದಿರಿಸಲು ಇಂಡಿಗೊ ಅವಕಾಶ ನೀಡಿದೆ.

ಹೆಚ್ಚುವರಿ ಆಸನಕ್ಕೆ ಮೂಲ ಕಾಯ್ದಿರಿಸುವಿಕೆ ದರದ ಶೇ 25ರವರೆಗೆ ಹೆಚ್ಚುವರಿ ದರ ನಿಗದಿಪಡಿಸಲಾಗಿದೆ. ಜುಲೈ 24ರಿಂದ ಪ್ರಯಾಣಿಸುವವರಿಗೆ ಈ ಆಯ್ಕೆ ನೀಡಲಾಗಿದೆ.

ಟ್ರಾವೆಲ್ ಪೋರ್ಟರ್ಲ್‌ಗಳು, ಇಂಡಿಗೊಕಾಲ್ ಸೆಂಟರ್ ಅಥವಾ ವಿಮಾನ ನಿಲ್ದಾಣಗಳ ಕೌಂಟರ್‌ಗಳಲ್ಲಿ ಎರಡು ಸೀಟು ಆಯ್ಕೆ ಮಾಡುವ ಅವಕಾಶ ಲಭ್ಯವಿರುವುದಿಲ್ಲ. ಇಂಡಿಗೋ ವೆಬ್‌ಸೈಟ್ ಮೂಲಕವೇ ಆಸನ ಕಾಯ್ದಿರಿಸಬೇಕು ಎಂದು ಕಂಪನಿ ತಿಳಿಸಿದೆ.

ಸಹಪ್ರಯಾಣಿಕರು ಅಂತರ ಕಾಯ್ದುಕೊಳ್ಳದೇ ಇರುವುದು ಪ್ರಯಾಣಿಕರ ಕಳವಳಕ್ಕೆ ಕಾರಣವಾಗಿದೆ ಎಂಬುದು ಇಂಡಿಗೊ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಜೂನ್ 20ರಿಂದ 28ರ ನಡುವಣ ಅವಧಿಯಲ್ಲಿ ಇಂಡಿಗೊ 25,000 ಪ್ರಯಾಣಿಕರನ್ನು ಸಮೀಕ್ಷೆಗೆ ಒಳಪಡಿಸಿತ್ತು.

ಪ್ರಸಕ್ತ ಸನ್ನಿವೇಶದಲ್ಲಿ ವಿಮಾನ ಪ್ರಯಾಣ ಅತ್ಯಂತ ಸುರಕ್ಷಿತವಾಗಿದ್ದರೂ ಪ್ರಯಾಣಿಕರ ಭಾವನೆ ಮತ್ತು ಸುರಕ್ಷತೆಯನ್ನು ಗೌರವಿಸುತ್ತೇವೆ ಎಂದು ಇಂಡಿಗೊದ ಕಾರ್ಯತಂತ್ರ ಮತ್ತು ಆದಾಯ ಅಧಿಕಾರಿ ಸಂಜಯ್ ಕುಮಾರ್ ಹೇಳಿದ್ದಾರೆ.

ಎರಡು ಸೀಟುಗಳ ಆಯ್ಕೆಗೆ ಅವಕಾಶ ನೀಡುವಂತೆ ನಮಗೆ ಮನವಿಗಳು ಬಂದಿದೆ. ಒಬ್ಬ ಪ್ರಯಾಣಿಕನಿಗೆ ಎರಡು ಸೀಟುಗಳ ಆಯ್ಕೆ ಅವಕಾಶ ನೀಡುವುದನ್ನು ಘೋಷಿಸಲು ಸಂತಸವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.