ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದಿಂದ ಭಾರತಕ್ಕೆ 20 ಟನ್‌ ವೈದ್ಯಕೀಯ ಪರಿಹಾರ ಸಾಮಗ್ರಿ ರವಾನೆ

Last Updated 29 ಏಪ್ರಿಲ್ 2021, 16:53 IST
ಅಕ್ಷರ ಗಾತ್ರ

ನವದೆಹಲಿ: ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳು, ವೆಂಟಿಲೇಟರ್, ಔಷಧಿಗಳು ಸೇರಿದಂತೆ 20 ಟನ್‌ನಷ್ಟು ವೈದ್ಯಕೀಯ ಪರಿಕರಗಳನ್ನು ಭಾರತಕ್ಕೆ ರಷ್ಯಾ ಗುರುವಾರ ಪೂರೈಕೆ ಮಾಡಿದೆ.

ಈ ಪರಿಹಾರ ಸಾಮಗ್ರಿಗಳನ್ನು ಹೊತ್ತ ರಷ್ಯಾದ ವಿಮಾನಯಾನ ಸಂಸ್ಥೆ ಎಮರ್‌ಕಾಮ್‌ಗೆ ಸೇರಿದ ಎರಡು ಸರಕು ಸಾಗಣೆ ವಿಮಾನಗಳು ದೆಹಲಿಗೆ ಬಂದಿಳಿದವು.

ದೇಶದಲ್ಲಿನ ಕೋವಿಡ್‌–19 ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಬೆನ್ನಲ್ಲೇ, ಈ ಪರಿಹಾರ ಸಾಮಗ್ರಿಗಳನ್ನು ರಷ್ಯಾ ರವಾನಿಸಿದೆ.

‘ಹಲವಾರು ವೈದ್ಯಕೀಯ ಸಾಧನಗಳು, ಔಷಧಿಗಳನ್ನು ರಷ್ಯಾ ನೀಡಿದೆ. ಈ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಉಭಯ ದೇಶಗಳ ನಡುವೆ ಇಂಥ ಸಹಕಾರ ಅಗತ್ಯವಿದೆ’ ಎಂದು ಭಾರತದಲ್ಲಿರುವ ರಷ್ಯಾದ ರಾಯಭಾರಿ ನಿಕೋಲಾಯ್‌ ಕುಡಾಶೇವ್‌ ಹೇಳಿದರು.

‘ಮುಂದಿನ ತಿಂಗಳು ಸ್ಪುಟ್ನಿಕ್‌ ಲಸಿಕೆಯನ್ನು ಪೂರೈಸಲಾಗುವುದು. ಅಲ್ಲದೇ, ಈ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸಲು ಅಗತ್ಯವಿರುವ ಸೌಲಭ್ಯಗಳನ್ನು ಸಹ ರಷ್ಯಾ ಒದಗಿಸಲಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT