ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರ ಮೇಲಿನ ದೌರ್ಜನ್ಯ ಕ್ಷಮಿಸಲಾಗದ ಪಾಪ: ಪ್ರಧಾನಿ ಮೋದಿ

Published : 25 ಆಗಸ್ಟ್ 2024, 10:17 IST
Last Updated : 25 ಆಗಸ್ಟ್ 2024, 10:17 IST
ಫಾಲೋ ಮಾಡಿ
Comments

ಜಲಗಾಂವ್‌ (ಮಹಾರಾಷ್ಟ್ರ): ಮಹಿಳೆಯರ ಮೇಲಿನ ದೌರ್ಜನ್ಯ ಕ್ಷಮಿಸಲಾಗದ ಪಾಪ. ತಪ್ಪಿತಸ್ಥರನ್ನು ಬಿಡಬಾರದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಉತ್ತರ ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯಲ್ಲಿ ‘ಲಕ್‌ಪತಿ ದೀದಿ ಸಮ್ಮೇಳನ’ದಲ್ಲಿ ಮಾತನಾಡಿದ ಮೋದಿ, ಕೋಲ್ಕತ್ತ ಆರ್‌.ಜಿ ಕರ್‌ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಹತ್ಯೆಯ ಘಟನೆಯನ್ನು ತೀವ್ರವಾಗಿ ಖಂಡಿಸಿದರು.

‘ಅಮ್ಮಂದಿರು, ಅಕ್ಕಂದಿರುವ ಮತ್ತು ಹೆಣ್ಣುಮಕ್ಕಳ ಸುರಕ್ಷತೆ ದೇಶದ ಪ್ರಮುಖ ಆದ್ಯತೆ. ದೇಶದ ಯಾವುದೇ ರಾಜ್ಯವಿರಲಿ, ಪ್ರತಿ ಹೆಣ್ಣಿನ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಈ ವಿಚಾರವನ್ನು ನಾನು ಕೆಂಪು ಕೋಟೆಯಿಂದ ಪದೇ ಪದೇ ಪ್ರಸ್ತಾಪಿಸಿದ್ದೇನೆ ಎಂದರು.

‘ಹೆಣ್ಣಿನ ಮೇಲಿನ ದೌರ್ಜನ್ಯ ಕ್ಷಮಿಸಲಾರದ ಪಾಪ, ತಪ್ಪಿತಸ್ಥರಿಗೆ  ಶಿಕ್ಷೆ ನೀಡಬೇಕು ಎಂದು ಪ್ರತಿ ರಾಜಕೀಯ ಪಕ್ಷ, ಪ್ರತಿ ಸರ್ಕಾರಕ್ಕೆ ಈ ಮೂಲಕ ತಿಳಿಸುತ್ತೇನೆ. ಅಲ್ಲದೆ ಹೆಣ್ಣಿನ ಮೇಲೆ ದೌರ್ಜನ್ಯ ನಡೆಸಲು ಸಹಾಯ ಮಾಡಿದವರೂ ತಪ್ಪಿತಸ್ಥರೇ ಆಗಿರುತ್ತಾರೆ, ಅದು ಆಸ್ಪತ್ರೆ, ಶಾಲೆ, ಸರ್ಕಾರ ಅಥವಾ ಪೊಲೀಸ್‌ ಇಲಾಖೆ ಎಲ್ಲೇ ಆಗಲಿ ನಿರ್ಲಕ್ಷ ಕಂಡುಬಂದರೆ, ಅಲ್ಲಿರುವ ಎಲ್ಲರೂ ಜವಾಬ್ದಾರರಾಗಿರುತ್ತಾರೆ. ಇದು ಮೇಲಿನ ಹುದ್ದೆಗಳಲ್ಲಿರುವವರಿಂದ ಹಿಡಿದು ಕೆಳಗಿನ ಹುದ್ದೆಯವರೆಗೂ ಅನ್ವಯಿಸುತ್ತದೆ’ ಎಂದರು.

‘ಸರ್ಕಾರ ಬಂದು ಹೋಗುತ್ತದೆ. ಆದರೆ ಮಹಿಳೆಯರನ್ನು ರಕ್ಷಿಸುವುದು, ಅವರ ಗೌರವ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ಪ್ರತಿಪಾದಿಸಿದರು.

‘ಲಕ್‌ಪತ್‌ ದೀದಿ ಯೋಜನೆ ಕೇವಲ ಮಹಿಳೆಯರ ಆದಾಯವನ್ನು ಹೆಚ್ಚಿಸುವುದಲ್ಲ, ಮುಂದಿನ ಪೀಳಿಗೆಯನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ. ಭಾರತ ಆರ್ಥಿಕತೆಯಲ್ಲಿ 3ನೇ ಅತಿ ದೊಡ್ಡ ರಾಷ್ಟ್ರವಾಗಬೇಕೆಂದರೆ ಅದರಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಎಂದು ಈ ವೇಳೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT