ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಶಯಗಳಲ್ಲಿ ನೀರು ಸಂಗ್ರಹ | ಶೇ 25ಕ್ಕೆ ಇಳಿಕೆ: ಸಿಡಬ್ಲ್ಯುಸಿ

Published 17 ಮೇ 2024, 16:23 IST
Last Updated 17 ಮೇ 2024, 16:23 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಪ್ರಮುಖ ಜಲಾಶಯಗಳಲ್ಲಿ ಅವುಗಳ ಗರಿಷ್ಠ ಸಂಗ್ರಹ ಸಾಮರ್ಥ್ಯದ ಶೇ 25ರಷ್ಟು ಮಾತ್ರ ನೀರು ಲಭ್ಯ ಇದೆ ಎಂದು ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ವಾರದ ಬುಲೆಟಿನ್‌ ತಿಳಿಸಿದೆ. 

ಪ್ರಮುಖ 150 ಜಲಾಶಯಗಳ ಗರಿಷ್ಠ ಸಂಗ್ರಹ ಸಾಮರ್ಥ್ಯ 178.784 ಬಿಸಿಎಂ (ಶತಕೋಟಿ ಘನ ಮೀಟರ್‌ಗಳು) ಇದೆ. ಸದ್ಯ, ಒಟ್ಟು ಸಾಮರ್ಥ್ಯದ ಶೇ 25ರಷ್ಟು ಅಂದರೆ, 45.277 ಬಿಸಿಎಂನಷ್ಟು ನೀರು ಸಂಗ್ರಹ ಇದೆ ಎಂದು ಆಯೋಗ ತಿಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಜಲಾಶಯಗಳಲ್ಲಿ 57.993 ಬಿಸಿಎಂನಷ್ಟು ನೀರು ಸಂಗ್ರಹ ಇತ್ತು. ಈ ವರ್ಷ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಸಿಡಬ್ಲ್ಯುಸಿ ಹೇಳಿದೆ.

ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳಲ್ಲಿನ 42 ಪ್ರಮುಖ ಜಲಾಶಯಗಳಲ್ಲಿ ಗರಿಷ್ಠ ನೀರಿನ ಸಂಗ್ರಹಣಾ ಸಾಮರ್ಥ್ಯ 53.334 ಬಿಸಿಎಂನಷ್ಟಾಗಿದೆ. ಇವುಗಳಲ್ಲಿ ಪ್ರಸ್ತುತ 7.494 ಬಿಸಿಎಂನಷ್ಟು (ಶೇ 14) ಮಾತ್ರ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 24ರಷ್ಟು ನೀರಿನ ಸಂಗ್ರಹ ಇತ್ತು ಎಂದು ಆಯೋಗದ ಅಂಕಿ ಅಂಶಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT