ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿವಿಸಿ: ಅಕ್ಟೋಬರ್‌ 30ರಿಂದ ನವೆಂಬರ್‌ 5 ವಿಚಕ್ಷಣೆ ಜಾಗೃತಿ ವಾರ

Published 12 ಸೆಪ್ಟೆಂಬರ್ 2023, 16:22 IST
Last Updated 12 ಸೆಪ್ಟೆಂಬರ್ 2023, 16:22 IST
ಅಕ್ಷರ ಗಾತ್ರ

ನವದೆಹಲಿ: ಭ್ರಷ್ಟಾಚಾರದ ಹಲವು ಅಪಾಯಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಅಕ್ಟೋಬರ್ 30ರಿಂದ ನವೆಂಬರ್‌ 5ರ ವರೆಗೆ ‘ವಿಚಕ್ಷಣೆ ಜಾಗೃತಿ ವಾರ– 2023’ರನ್ನು ಆಚರಿಸಲು ಕೇಂದ್ರೀಯ ವಿಚಕ್ಷಣಾ ಆಯೋಗ (ಸಿವಿಸಿ) ನಿರ್ಧರಿಸಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಮಗ್ರತೆ ಮತ್ತು ನೈತಿಕತೆಯ ಮಹತ್ವ ಸಾರುವಂಥ ಚಟುವಟಿಕೆಗಳಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಒಳಗೊಳ್ಳುವಂತೆ ಮಾಡುವ ಕುರಿತು ಜಾಗೃತಿ ವಾರದಲ್ಲಿ ವಿಶೇಷ ಒತ್ತು ನೀಡಲಾಗುವುದು. 

ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಯುವಜನರು ಭಾಗಿಯಾಗುವುದರ ಮಹತ್ವವನ್ನು ಒತ್ತಿ ಹೇಳುವಂಥ ಚಟುವಟಿಕೆಗಳನ್ನು ಪ್ರಚುರಪಡಿಸುವಂತೆ ಸಂಸ್ಥೆಗಳಿಗೆ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT