ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ನಲ್ಲಿ ನೀರು ಕುಡಿದದ್ದಕ್ಕೆ ಹಲ್ಲೆ: ಪರಿಶಿಷ್ಟ ವ್ಯಕ್ತಿ ಸಾವು

Published 28 ನವೆಂಬರ್ 2023, 16:24 IST
Last Updated 28 ನವೆಂಬರ್ 2023, 16:24 IST
ಅಕ್ಷರ ಗಾತ್ರ

ಬದೌನ್(ಉತ್ತರಪ್ರದೇಶ): 'ಸಾರ್ವಜನಿಕ ನಲ್ಲಿಯಲ್ಲಿ ನೀರು ಕುಡಿದಿದ್ದಕ್ಕಾಗಿ ಹಲವರಿಂದ ಥಳಿತಕ್ಕೆ ಒಳಗಾಗಿದ್ದ ಎನ್ನಲಾದ ಪರಿಶಿಷ್ಟ ವ್ಯಕ್ತಿ ಮೃತಪಟ್ಟಿದ್ದಾನೆ‘ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಬದೌನ್‌ ಜಿಲ್ಲೆಯ ಉಸಹೈತ್ ಪೊಲೀಸ್‌ ಠಾಣೆ ವ್ಯಾಪ್ತಿಯ ಸಾತ್ರ ಗ್ರಾಮದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಕಮಲೇಶ್ ಮೃತ ವ್ಯಕ್ತಿ.

ಸೂರಜ್‌ ರಾಠೋಡ್‌ ಹಾಗೂ ಆತನ ಸಹಚರರು ಕಮಲೇಶ್‌ ಅವರಿಗೆ ಬಡಿಗೆಗಳಿಂದ ಹೊಡೆದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಕಮಲೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಅವರು ಮೃತಪಟ್ಟರು ಎಂದು ಎಎಸ್ಪಿ ಅಮಿತ್‌ ಕಿಶೋರ್‌ ಶ್ರೀವಾಸ್ತವ ತಿಳಿಸಿದ್ದಾರೆ.

‘ಮೃತನ ತಂದೆ ಜಗದೀಶ್‌ ನೀಡಿರುವ ದೂರಿನ ಆಧಾರದ ಮೇಲೆ ರಾಠೋಡ್‌ನನ್ನು ಬಂಧಿಸಿ, ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT