ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರದಲ್ಲಿ ದಲಿತರು, ಒಬಿಸಿಗಳಿಗೆ ಸೂಕ್ತ ಗೌರವ: ನರೇಂದ್ರ ಮೋದಿ

ಮಧ್ಯಪ್ರದೇಶದ ಸಾಗರ್‌ನಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಪ್ರಧಾನಿ ಹೇಳಿಕೆ
Published 12 ಆಗಸ್ಟ್ 2023, 15:21 IST
Last Updated 12 ಆಗಸ್ಟ್ 2023, 15:21 IST
ಅಕ್ಷರ ಗಾತ್ರ

ಸಾಗರ್ (ಮಧ್ಯಪ್ರದೇಶ): ‘ದಲಿತರು, ಒಬಿಸಿಗಳು ಮತ್ತು ಬುಡಕಟ್ಟು ಜನಾಂಗಕ್ಕೆ ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸೂಕ್ತ ಗೌರವ ದೊರೆಯುವಂತಾಗಿದೆ. ಈ ಹಿಂದೆ ಆಡಳಿತ ನಡೆಸಿದ್ದವರು ಈ ವರ್ಗಗಳನ್ನು ನಿರ್ಲಕ್ಷಿಸಿದ್ದರು. ಇವರನ್ನು ಚುನಾವಣೆ ಸಂದರ್ಭಗಳಲ್ಲಿ ಮಾತ್ರ ನೆನಪಿಸಿಕೊಳ್ಳುತ್ತಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ  ಶನಿವಾರ ಹೇಳಿದ್ದಾರೆ. 

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಢಾನಾದಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಈ ಹಿಂದಿನ ಸರ್ಕಾರಗಳು ಬಡವರಿಗೆ ಕನಿಷ್ಠ ನೀರಿನ ಸೌಕರ್ಯವನ್ನೂ ನೀಡಲು ವಿಫಲವಾಗಿದ್ದವು. ಆದರೆ, ನಮ್ಮ ಸರ್ಕಾರದಲ್ಲಿ ದಲಿತರ ಕೇರಿಗಳು, ಹಿಂದುಳಿದ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನಲ್ಲಿ ನೀರು ಸೌಕರ್ಯ ಕಲ್ಪಿಸಲಾಗಿದೆ’ ಎಂದರು. 

ಢಾನಾದಲ್ಲಿ ಮೋದಿ ಅವರು ವಿವಿಧ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆಯ ಜತೆಗೆ  ಬಿನಾ-ಕೋಟಾ ರೈಲು ಮಾರ್ಗ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.‌‌

ಸಾರ್ವಜನಿಕ ರ‍್ಯಾಲಿಗೂ ಮುನ್ನ ಪ್ರಧಾನಿ ಅವರು, ಬದ್‌ತುಮಾ ಗ್ರಾಮದಲ್ಲಿ ₹100 ಕೋಟಿ ವೆಚ್ಚದಲ್ಲಿ ಸಂತ ಹಾಗೂ ಸಾಮಾಜಿಕ ಸುಧಾರಕ ರವಿದಾಸ್ ಅವರ ನೆನಪಿಗಾಗಿ ನಿರ್ಮಿಸುತ್ತಿರುವ ದೇವಾಲಯಕ್ಕೆ ಭೂಮಿಪೂಜೆ ನೆರವೇರಿಸಿದರು.

ಅಸ್ಥಿರತೆ, ಅತಿರೇಕ ಮತ್ತು ದೌರ್ಜನ್ಯಗಳಿಂದ ಕೂಡಿದ್ದ ಮೊಘಲರ ಕಾಲಘಟ್ಟದಲ್ಲಿ ಜನಿಸಿದ್ದ ಸಂತ ರವಿದಾಸ್ ಅವರು ಸಾಮಾಜಿಕ ಅನಿಷ್ಟಗಳ ವಿರುದ್ಧ ಜಾಗೃತಿ ಮೂಡಿಸಿದರು ಎಂದು ಶ್ಲಾಘಿಸಿದರು. 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT