ನವದೆಹಲಿ: ‘ತುರ್ತು ಬಳಕೆಗಾಗಿ ಭಾರತ್ ಬಯೊಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ನೀಡುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) 4 ರಿಂದ 6 ವಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಂಭವವಿದೆ’ ಎಂದು ಡಬ್ಲ್ಯೂಎಚ್ಒದ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ತಿಳಿಸಿದ್ದಾರೆ.

ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್ಇ) ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ‘ಕೋವ್ಯಾಕ್ಸಿನ್ ಲಸಿಕೆಯು ಡಬ್ಲ್ಯೂಎಚ್‌ಒ ಪರಿಶೀಲನೆಯಲ್ಲಿದೆ. ಅದನ್ನು ಉತ್ಪಾದಿಸಿರುವ ಭಾರತ್ ಬಯೊಟೆಕ್ ಸಂಸ್ಥೆಯು ಪೂರಕ ದಾಖಲೆಗಳನ್ನು ಡಬ್ಲ್ಯೂಎಚ್‌ಒ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿದೆ’ ಎಂದು ತಿಳಿಸಿದರು.

ಡಬ್ಲ್ಯೂಎಚ್ಒ ಮಾರ್ಗದರ್ಶಿ ಸೂತ್ರಗಳ ಅನುಸಾರ, ಸಾರ್ವಜನಿಕ ಆರೋಗ್ಯದ ತುರ್ತು ಸಂದರ್ಭದಲ್ಲಿ ಬಳಸಬಹುದಾದ ಔಷಧ, ಲಸಿಕೆಗಳನ್ನು ಆಧರಿಸಿ ತುರ್ತು ಬಳಕೆಯ ಪಟ್ಟಿ (ಇಯುಎಲ್) ತಯಾರಿಸಲಾಗುತ್ತದೆ.

‘ಇಯುಎಲ್‌ಗೆ ಸೇರಿಸಲು ಕೆಲವೊಂದು ಪ್ರಕ್ರಿಯೆಗಳಿವೆ. ಕಂಪನಿಯು ಲಸಿಕೆಯ ಮೂರು ಹಂತದ ಪ್ರಯೋಗಗಳನ್ನು ಪೂರೈಸಿದ್ದು, ಪೂರಕ ಅಂಕಿ ಅಂಶಗಳನ್ನು ಸಲ್ಲಿಸಬೇಕಾಗುತ್ತದೆ. ಅದನ್ನು ವಿಶ್ವ ಆರೋಗ್ಯ ಸಂಸ್ಥೆಯ ಪರಿಣತ ಸಲಹಾ ಸಂಸ್ಥೆಯು ಪರಿಶೀಲಿಸಲಿದೆ‘ ಎಂದು ಸೌಮ್ಯಾ ಅವರು ತಿಳಿಸಿದರು.

ಪ್ರಸ್ತುತ, ವಿಶ್ವ ಆರೋಗ್ಯ ಸಂಸ್ಥೆಯು ಪೈಝರ್ ಮತ್ತು ಆಸ್ಟ್ರಾಜೆನಿಕಾ–ಎಸ್‌ಕೆ ಸಂಸ್ಥೆಯು ಉತ್ಪಾದಿಸಿರುವ ಲಸಿಕೆ ಸೇರಿದಂತೆ ಆರು ಲಸಿಕೆಗಳಿಗೆ ಮಾನ್ಯತೆ ನೀಡಿದೆ. ಪರಿಣತರ ಸಮೂಹದ ಸಲಹೆ ಆಧರಿಸಿ ಆರು ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಈಗ ಕೋವ್ಯಾಕ್ಸಿನ್ ಲಸಿಕೆಯನ್ನು ಪರಿಶೀಲಿಸುತ್ತಿದ್ದೇವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.