ನವದೆಹಲಿ: ರಕ್ಷಣಾ ಸಚಿವಾಲಯ ಕೈಗೊಂಡಿರುವ ಕಾರ್ಯಾಚರಣೆಗಳು, ಯುದ್ಧಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಗೊಳಿಸುವುದು, ಅವುಗಳನ್ನು ಸಂರಕ್ಷಿಸುವುದು ಹಾಗೂ ಸಂಗ್ರಹಿಸುವ ನೀತಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಅನುಮೋದನೆ ನೀಡಿದ್ದಾರೆ.

‘ಯುದ್ಧ ಹಾಗೂ ಇತರ ಕಾರ್ಯಾಚರಣೆಗಳ ಕುರಿತ ಮಾಹಿತಿ ಸಕಾಲದಲ್ಲಿ ಪ್ರಕಟವಾಗಬೇಕು. ಇದರಿಂದ, ಯುದ್ಧದಂತಹ ಘಟನೆಗಳಿಗೆ ಕಾರಣಗಳೇನು ಎಂಬುದು ಜನರಿಗೆ ತಿಳಿಸಿದಂತಾಗುತ್ತದೆ. ಸಂಶೋಧನೆಗೆ ಅಧಿಕೃತ ಮಾಹಿತಿ ನೀಡಿದಂತಾಗುತ್ತದೆ. ಜೊತೆಗೆ, ಐತಿಹಾಸಿಕ ಘಟನೆಗಳ ಕುರಿತ ಮಿಥ್ಯೆಗಳನ್ನು ಅಲ್ಲಗಳೆಯಲು ಸಹ ಸಾಧ್ಯವಾಗಲಿದೆ’ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈ ಹೊಸ ನೀತಿಯ ಪ್ರಕಾರ, ಮೂರು ಭದ್ರತಾಪಡೆಗಳು, ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್, ಅಸ್ಸಾಂ ರೈಫಲ್ಸ್ ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್ ಸೇರಿದಂತೆ ರಕ್ಷಣಾ ಸಚಿವಾಲಯದಡಿ ಬರುವ ಸಂಸ್ಥೆಗಳು ಯುದ್ಧದ ದಿನಚರಿಗಳು, ಕಲಾಪಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಕಾರ್ಯಾಚರಣೆಯ ದಾಖಲೆ ಪುಸ್ತಕಗಳನ್ನು ಸಚಿವಾಲಯದ ಇತಿಹಾಸ ವಿಭಾಗಕ್ಕೆ ವರ್ಗಾಯಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.