ನವದೆಹಲಿ: ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಗಾಗಿ ₹28 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಹಾಗೂ ಸೇನಾ ಉಪಕರಣಗಳ ಖರೀದಿಗೆರಕ್ಷಣಾ ಸಚಿವಾಲಯವು ಗುರುವಾರ ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು.ಒಟ್ಟು ಏಳು ಪ್ರಸ್ತಾಪಗಳಿಗೆ ಡಿಎಸಿ ಒಪ್ಪಿಗೆ ಸೂಚಿಸಿದೆ.

ಪೂರ್ವ ಲಡಾಖ್‌ನಲ್ಲಿ ಚೀನಾ ಜೊತೆಗಿನ ಗಡಿ ಬಿಕ್ಕಟ್ಟು ಮುಂದುವರಿದಿರುವ ಸಂದರ್ಭದಲ್ಲಿಯೇ ಶಸ್ತ್ರಾಸ್ತ್ರ ಖರೀದಿ ಪ್ರಸ್ತಾಪಗಳಿಗೆ ರಕ್ಷಣಾ ಉಪಕರಣಗಳ ಖರೀದಿ ಮಂಡಳಿಯು (ಡಿಎಸಿ) ಒಪ್ಪಿಗೆ ನೀಡಿದೆ. ಬಹುತೇಕ ಶಸ್ತ್ರಾಸ್ತ್ರ ಹಾಗೂ ಸೇನಾ ಉಪಕರಣಗಳನ್ನು ದೇಶೀಯ ಕೈಗಾರಿಕೆಗಳಿಂದಲೇ ಖರೀದಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

‘ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಿತು. ಏಳು ಪ್ರಸ್ತಾಪಗಳ ಪೈಕಿ, ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ ಯೋಜನೆಗೆ ಉತ್ತೇಜನ ನೀಡಲು ₹27 ಸಾವಿರ ಕೋಟಿ ಮೌಲ್ಯದ ಪರಿಕರಗಳನ್ನು ದೇಶಿ ಸಂಸ್ಥೆಗಳಿಂದಲೇ ಖರೀದಿಸುವ ‘ಅಸೆಪ್ಟೆನ್ಸ್ ಆಫ್ ನೆಸೆಸ್ಸಿಟಿ’ಗೆ (ಎಒಎನ್‌ಎಸ್) ಒಪ್ಪಿಗೆ ನೀಡಲಾಗಿದೆ’ ಎಂದಿದ್ದಾರೆ.

ಇವುಗಳಲ್ಲಿ ಭಾರತೀಯ ವಾಯುಪಡೆಗೆ ಡಿಆರ್‌ಡಿಒ ವಿನ್ಯಾಸಗೊಳಿಸಿದ ‘ಏರ್‌ಬಾರ್ನ್ ಅರ್ಲಿ ವಾರ್ನಿಂಗ್ ಆ್ಯಂಡ್ ಕಂಟ್ರೋಲ್ ಸಿಸ್ಟಂ’(ಎಇಡ್ಲ್ಯುಆ್ಯಂಡ್‌ಸಿ), ಭಾರತೀಯ ನೌಕಾಪಡೆಗಾಗಿ ಅತ್ಯಾಧುನಿಕ ಗಸ್ತು ಹಡಗು ಹಾಗೂ ಭೂಸೇನೆಗಾಗಿ ‘ಮಾಡ್ಯುಲಾರ್ ಬ್ರಿಜ್’(ತಕ್ಷಣದಲ್ಲೇ ಸೇತುವೆ ನಿರ್ಮಾಣ ವ್ಯವಸ್ಥೆಯ ವಾಹನ) ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.