ಮಂಗಳವಾರ, 30 ಡಿಸೆಂಬರ್ 2025
×
ADVERTISEMENT
ADVERTISEMENT

Delhi Blast: ಎನ್‌ಐಎಗೆ ವರ್ಗಾಯಿಸಿದ ಕೇಂದ್ರದ ಗೃಹ ಸಚಿವಾಲಯ

Published : 11 ನವೆಂಬರ್ 2025, 10:39 IST
Last Updated : 11 ನವೆಂಬರ್ 2025, 20:04 IST
ಫಾಲೋ ಮಾಡಿ
Comments
‘ಸ್ಫೋಟಕದೊಂದಿಗೆ ಕಾರು ರಾಜಧಾನಿ ಪ್ರವೇಶಿಸಿದ್ದು ಹೇಗೆ?’
ಕಾರಿನಲ್ಲಿ ಸಂಭವಿಸಿದ ಸ್ಫೋಟವು ಭದ್ರತಾ ಮತ್ತು ಗುಪ್ತಚರ ವೈಫಲ್ಯವನ್ನು ಬೊಟ್ಟು ಮಾಡಿ ತೋರಿಸಿದೆ. ಫರೀದಾಬಾದ್‌ನಲ್ಲಿ ಸ್ಫೋಟಕಗಳ ವಶ ಹಾಗೂ ದೆಹಲಿಯ ಆಜುಬಾಜಿನಿಂದ ಕಾರ್ಯ ನಿರ್ವಹಿಸುತ್ತಿರುವ ‘ವೈಟ್ ಕಾಲರ್ ಭಯೋತ್ಪಾದಕ ಜಾಲ’ದ ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲೇ ಶಂಕಿತನು ಸ್ಫೋಟಕಗಳೊಂದಿಗೆ ಮಧ್ಯ ದೆಹಲಿಗೆ ಕಾರನ್ನು ಹೇಗೆ ಓಡಿಸಿದ ಎಂಬ ಪ್ರಶ್ನೆ ಉದ್ಭವವಾಗಿದೆ. ‘2,900 ಕೆ.ಜಿ ಸ್ಫೋಟಕಗಳನ್ನು ಪೊಲೀಸರು ವಶಕ್ಕೆ ಪಡೆದ ಘಟನೆಯ ನಂತರವೂ ಕಾರಿನ ಚಾಲಕ ರಾಷ್ಟ್ರ ರಾಜಧಾನಿಗೆ ನುಸುಳುವಲ್ಲಿ ಯಶಸ್ವಿಯಾದ. ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ಮೂರು ಗಂಟೆ ನಿಲ್ಲಿಸ ಲಾಗಿತ್ತು’ ಎಂದು ಪೊಲೀಸರೇ ಹೇಳಿದ್ದಾರೆ.
ಕಾರು ಸ್ಫೋಟದ ಹಿಂದಿನ ಸಂಚುಕೋರರನ್ನು ಸುಮ್ಮನೆ ಬಿಡುವುದಿಲ್ಲ. ಕೃತ್ಯಕ್ಕೆ ಕಾರಣರಾದ ಪ್ರತಿಯೊಬ್ಬರನ್ನೂ ನಮ್ಮ ತನಿಖಾ ಸಂಸ್ಥೆಗಳು ಕಾನೂನಿನ ಎದುರು ತಂದು ನಿಲ್ಲಿಸಲಿವೆ.
– ನರೇಂದ್ರ ಮೋದಿ, ಪ್ರಧಾನಿ
ಆಕಸ್ಮಿಕವಾಗಿ ಸಂಭವಿಸಿತೇ ಸ್ಫೋಟ?
‘ಐ20 ಕಾರ್‌ನಲ್ಲಿ ಸಾಗಿಸಲಾಗಿದ್ದ ವಸ್ತುವು ಆಕಸ್ಮಿಕವಾಗಿ ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಫೋಟದ ನಂತರ ಯಾವುದೇ ಕುಳಿ ಉಂಟಾಗಿಲ್ಲ. ಹೀಗಾಗಿ ಸ್ಫೋಟಕ ವಸ್ತುಗಳನ್ನು ಬೇರೆಡೆಗೆ ಸಾಗಿಸುವಾಗ ಅಥವಾ ಇನ್ನೆಲ್ಲೋ ಬಚ್ಚಿಡಲು ಕೊಂಡೊಯ್ಯುವಾಗ ಆಕಸ್ಮಿಕವಾಗಿ ಅವಘಡ ಉಂಟಾಗಿರಬಹುದು. ಇದು ವ್ಯವಸ್ಥಿತ ಆತ್ಮಹತ್ಯಾ ದಾಳಿ ಆಗಿರಲಿಕ್ಕಿಲ್ಲ’ ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಕುಳಿ ಉಂಟಾಗದೇ ಇದ್ದಲ್ಲಿ ಸ್ಫೋಟಕವನ್ನು ದೊಡ್ಡ ಮಟ್ಟದ ಹಾನಿಗೆ ತಕ್ಕಂತೆ ತಾಂತ್ರಿಕವಾಗಿ ಅಣಿಗೊಳಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಹೀಗಾಗಿ ಅಕಸ್ಮಾತ್ತಾಗಿ ಸ್ಫೋಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT