ದುರ್ಘಟನೆಯ ವಿಚಾರ ತಿಳಿದು ಆಘಾತವಾಗಿದೆ. ಸ್ಫೋಟದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ. ಪ್ರಸಕ್ತ ಲಭ್ಯವಿರುವ ಮಾಹಿತಿಗಳ ಪ್ರಕಾರ ಘಟನೆಯಲ್ಲಿ ಚೀನಾದ ಯಾವುದೇ ಪ್ರಜೆಗೂ ಹಾನಿಯಾಗಿಲ್ಲ ಎಂಬುದು ತಿಳಿದುಬಂದಿದೆ.
– ಲಿನ್ ಜಿಯಾನ್ ಚೀನಾ ವಿದೇಶಾಂಗ ವಕ್ತಾರ
ದೆಹಲಿಯಲ್ಲಿ ನಡೆದ ಸ್ಫೋಟದ ಬಗ್ಗೆ ತಿಳಿದು ಬೇಸರವಾಗಿದೆ. ಶ್ರೀಲಂಕಾವು ಭಾರತೀಯರ ಪರವಾಗಿ ಇರಲಿದೆ.
– ಅನುರಾ ಕುಮಾರ ಡಿಸ್ಸನಾಯಕೆ ಶ್ರೀಲಂಕಾ ಅಧ್ಯಕ್ಷ
ಸಂತ್ರಸ್ತರಿಗೆ ಸಾಂತ್ವನ ತಿಳಿಸಲು ಬಯಸುತ್ತೇವೆ ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತದ ಜನತೆ ಹಾಗೂ ಭಾರತ ಸರ್ಕಾರದ ಜತೆಗೆ ಮಾಲ್ಡೀವ್ಸ್ ಇರಲಿದೆ – ಮೊಹಮದ್ ಮುಯಿಜ್ಜು ಮಾಲ್ಡೀವ್ಸ್ ಅಧ್ಯಕ್ಷ ––– ಈ ದುಃಖದ ಸಮಯದಲ್ಲಿ ನೇಪಾಳವು ಭಾರತದ ಜತೆಗಿರಲಿದೆ.