ಆರೋಪಿ ವಿರುದ್ಧ 5 ಕ್ರಿಮಿನಲ್ ಪ್ರಕರಣ
ಚಾಕುವಿನಿಂದ ಹಲ್ಲೆ ಸೇರಿ ಐದು ಕ್ರಿಮಿನಲ್ ಪ್ರಕರಣಗಳು ಆರೋಪಿ ವಿರುದ್ಧ ದಾಖಲಾಗಿರುವುದು ತಿಳಿದುಬಂದಿದೆ. ಮುಖ್ಯಮಂತ್ರಿ ಅವರ ಮೇಲೆ ಹಲ್ಲೆ ನಡೆಸಿದ ಸಂದರ್ಭದಲ್ಲಿ ಆರೋಪಿ ಬಳಿ ಯಾವುದೇ ಶಸ್ತ್ರಾಸ್ತ್ರಗಳು ಇರಲಿಲ್ಲ. ಮುಖ್ಯಮಂತ್ರಿ ಭೇಟಿಗೂ ಮುನ್ನ ಕಠಿಣ ಭದ್ರತಾ ತಪಾಸಣೆ ನಡೆಸಲಾಗುತ್ತದೆ ಎಂದು ಆತನಿಗೂ ತಿಳಿದಿತ್ತು. ಬಟ್ಟೆ ಮತ್ತು ಕಾಗದಗಳಿದ್ದ ಚೀಲವನ್ನು ಆತ ಹಿಡಿದುಕೊಂಡು ಬಂದಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದರು.