ಚುನಾವಣಾ ಆಯೋಗದ ಅಂಕಿ ಅಂಶ ಪ್ರಕಾರ 2015ರ ವಿಧಾನಸಭಾ ಚುನಾವಣೆಗೆ ನಡೆದ ಮತದಾನಕ್ಕಿಂತ ಶೇ. 5ರಷ್ಟು ಮತದಾನ ಪ್ರಮಾಣ ಇಳಿಕೆ ಕಂಡಿದೆ. ಚಾಂದ್ನಿ ಚೌಕ್ನ ಬಲ್ಲಿಮಾರಾನ್ನಲ್ಲಿ ಅತೀ ಹೆಚ್ಚು ಅಂದರೆಶೇ. 71.16 ಮತದಾನವಾಗಿದೆ. ಅದೇ ವೇಳೆ ದೆಹಲಿ ಕಂಟೋನ್ಮೆಂಟ್ನಲ್ಲಿ ಅತೀ ಕಡಿಮೆ ಅಂದರೆ ಶೇ. 45.5 ಮತದಾನವಾಗಿದೆ ಎಂದು ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿ ರಣಬೀರ್ ಸಿಂಗ್ ಹೇಳಿದ್ದಾರೆ. 13,780 ಮತಗಟ್ಟೆಯಲ್ಲಿನ ಮಾಹಿತಿಗಳನ್ನು ಚುನಾವಣಾ ಆಯೋಗ ಸಂಗ್ರಹಿಸಿದೆ ಎಂದು ಅವರು ಹೇಳಿದ್ದಾರೆ.