ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿಗೃಹಕ್ಕೆ ಜಾಮಿಯಾ ವಿದ್ಯಾರ್ಥಿ ಸ್ಥಳಾಂತರಿಸಲು ಕೋರ್ಟ್‌ ನಿರ್ದೇಶನ

‍ಬಿಎ ಪರೀಕ್ಷೆಗಳ ಹಿನ್ನೆಲೆ; ಮೂರು ದಿನಗಳ ಪೆರೋಲ್
Last Updated 3 ಡಿಸೆಂಬರ್ 2020, 11:25 IST
ಅಕ್ಷರ ಗಾತ್ರ

ನವದೆಹಲಿ: ಬಿಎ(ಪರ್ಷಿಯನ್‌) ಪರೀಕ್ಷೆಗೆ ಹಾಜರಾಗಬೇಕಾದ ಕಾರಣ ಜೈಲಿನಲ್ಲಿರುವ ಜಾಮಿಯಾ ಮಿಲಿಯಾ ಇಸ್ಲಾಮಿಯಾ(ಜೆಎಂಐ) ವಿಶ್ವವಿದ್ಯಾಲಯದ ವಿದ್ಯಾರ್ಥಿ ಆಸಿಫ್‌ ಇಕ್ಬಾಲ್‌ ತನ್ಹಾ ಅವರನ್ನು ಅತಿಥಿಗೃಹಕ್ಕೆ ಸ್ಥಳಾಂತರಿಸುವಂತೆ ದೆಹಲಿ ಹೈಕೋರ್ಟ್‌ ಗುರುವಾರ ಬಂದೀಖಾನೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಈಶಾನ್ಯ ದೆಹಲಿಯಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಆಸಿಫ್‌ರನ್ನು ಪೊಲೀಸರು ಬಂಧಿಸಿ, ಜೈಲ್‌ಗೆ ಕಳುಹಿಸಲಾಗಿತ್ತು.

ಶುಕ್ರವಾರದಿಂದ ಆರಂಭವಾಗುವ ಮೂರು ದಿನಗಳ ಪರೀಕ್ಷೆಗಳಿಗೆ ಹಾಜರಾಗಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜೈಲಿನಲ್ಲಿರುವ ಆಸಿಫ್‌ರನ್ನು, ಅವರ ಅಧ್ಯಯನ ಪರಿಕರಗಳೊಂದಿಗೆ ಲಜಪತ್‌ ನಗರದ ಅತಿಥಿಗೃಹಕ್ಕೆ ಸ್ಥಳಾಂತರಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ನ್ಯಾಯಮೂರ್ತಿ ಮನೋಜ್‌ಕುಮಾರ್ ಒಹ್ರಿ ಅವರು ಆಸಿಫ್‌ಗೆ ಯಾವುದಾದರೂ ಶೈಕ್ಷಣಿಕ ಪರಿಕರಗಳ ಅಗತ್ಯವಿದ್ದರೆ ಅದನ್ನೂ ಪೂರೈಸುವಂತೆ ಜೈಲ್ ಸೂಪರಿಂಟೆಂಡೆಂಟ್‌ಗೆ ತಿಳಿಸಿದ್ದಾರೆ.

‘ಡಿಸೆಂಬರ್ 4, 5 ಮತ್ತು 7 ರಂದು ಪರೀಕ್ಷೆ ನಡೆಯಲಿದೆ. ಆ ಮೂರು ದಿನ ಆಸಿಫ್ ಅವರನ್ನು ಅತಿಥಿ ಗೃಹದಿಂದ ಜೆಎಂಐ ವಿವಿಯ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿಬರಲು ಅನುಕೂಲ ಮಾಡಿಕೊಡಬೇಕು ಹಾಗೂ ಮೂರು ಪರೀಕ್ಷೆಗಳು ಮಗಿದ ನಂತರ ವಾಪಸ್ ಅವರನ್ನು ಜೈಲಿಗೆ ಕಳುಹಿಸಬೇಕು‘ ಎಂದು ನ್ಯಾಯಾಲಯ ಸೂಚಿಸಿದೆ. ವಿಚಾರಣಾ ನ್ಯಾಯಾಲಯ ಪರೀಕ್ಷೆ ನಡೆಯುವ ಮೂರು ದಿನಗಳ ಕಾಲ ಆಸಿಫ್‌ಗೆ ಕಸ್ಟಡಿ ಪೆರೋಲ್ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT