ಜಮ್ಮು: ಗೋವನ್ನು 'ರಾಷ್ಟ್ರೀಯ ತಾಯಿ' ಎಂದು ಘೋಷಿಸಬೇಕು ಎಂದು 'ಗೋ ರಕ್ಷಾ ಆಂದೋಲನ' ಸಂಘಟನೆ ಗುರುವಾರ ಒತ್ತಾಯಿಸಿದೆ.

ಗೋವುಗಳ ರಕ್ಷಣೆ ಉದ್ದೇಶದಿಂದ ರಾಷ್ಟ್ರದಾದ್ಯಂತ ಅಭಿಯಾನ ನಡೆಸುತ್ತಿರುವ ಈ ಸಂಘಟನೆ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಮ್ಮುವಿನ ನಾಗರಿಕ ಸಚಿವಾಲಯಕ್ಕೆ ಮುತ್ತಿಗೆ ಹಾಕುವುದಾಗಿಯೂ ತಿಳಿಸಿದೆ.

'ಗೋವನ್ನು ರಾಷ್ಟ್ರೀಯ ತಾಯಿ ಎಂದು ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಇಡೀ ದೇಶದಲ್ಲಿ, ಅದರಲ್ಲೂ ಹಿಂದೂಗಳು ಗೋವನ್ನು ಮಾತೆ ಎಂದು ಪರಿಗಣಿಸುತ್ತಾರೆ' ಎಂದು ಯೋಗ ಗುರು ವಿಜಯ್ ಕೃಷ್ಣ ಪರಶಾರ್ ಅವರು ಮಾಧ್ಯಮವರಿಗೆ ಹೇಳಿದ್ದಾರೆ.

ಗೋವಿಗೆ ತಾಯಿಯ ಸ್ಥಾನಮಾನ ನೀಡುವಂತೆ ಸರ್ಕಾರಗಳನ್ನು ಒತ್ತಾಯಿಸಲು ರಾಷ್ಟ್ರವ್ಯಾಪಿ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

'ನವೆಂಬರ್ 3ರಂದು ಜಮ್ಮುವಿನ ಇಂದಿರಾ ಚೌಕ ಪ್ರದೇಶದಿಂದ ನಾಗರಿಕ ಸಚಿವಾಲಯದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು' ಎಂದಿರುವ ಪರಶಾರ್, 'ಬೇಡಿಕೆಯಂತೆ ಗೋವನ್ನು ರಾಷ್ಟ್ರೀಯ ತಾಯಿ ಎಂದು ಘೋಷಿಸಬೇಕೆಂದು ಒತ್ತಾಯಿಸಿ ನಾಗರಿಕ ಸಚಿವಾಲಯಕ್ಕೆ ಮುತ್ತಿಗೆ ಹಾಕುತ್ತೇವೆ' ಎಂದಿದ್ದಾರೆ.

ಇದೇ ವೇಳೆ ಗೋಪಾಷ್ಠಮಿಯ ಶುಭಾಶಯ ತಿಳಿಸಿರುವ ಅವರು, ಸಮಾಜದ ಎಲ್ಲ ವರ್ಗದ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಪವಿತ್ರ ಉದ್ದೇಶಕ್ಕಾಗಿ ಎಲ್ಲರೂ ಒಂದಾಗಬೇಕು ಎಂದು ಸಂಘಟನೆ ಕರೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.