ಮುಂಬೈ: ವೈಮಾನಿಕ ಕಾರ್ಯಾಚರಣೆಗಳು, ತರಬೇತಿ ಮತ್ತು ಎಂಜಿನಿಯರಿಂಗ್ ಕಾರ್ಯವಿಧಾನಗಳಿಗೆ ಸಂಬಂಧಿಸಿದ ದಾಖಲಾತಿಗಳ ಕೆಲವು ವ್ಯವಸ್ಥಿತ ನ್ಯೂನತೆಗಳಿಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು( ಡಿಜಿಸಿಎ) ಇಂಡಿಗೊ ಏರ್ಲೈನ್ಸ್ಗೆ ₹30 ಲಕ್ಷ ದಂಡ ವಿಧಿಸಿದೆ.

ಈ ವರ್ಷ 6 ತಿಂಗಳ ಅವಧಿಯಲ್ಲಿ 4 ಬಾರಿ A321 ವಿಮಾನದ ಟೇಲ್ ಸ್ಟ್ರೈಕ್( ವಿಮಾನದ ಲ್ಯಾಂಡಿಂಗ್ ವೇಳೆ ಹಿಂಬದಿಯ ಭಾಗ ರನ್ವೇಗೆ ತಾಗುವುದು) ಸಂಭವಿಸಿತ್ತು. ಈ ಬಗ್ಗೆ ನಿರ್ದೇಶನಾಲಯವು ಪರಿಶೀಲನೆ ನಡೆಸಿತ್ತು.

ಲೆಕ್ಕಪರಿಶೋಧನೆ ವೇಳೆ ವೈಮಾನಿಕ ಸಂಸ್ಥೆಯ ಕಾರ್ಯಾಚರಣೆ, ತರಬೇತಿ, ಎಂಜಿನಿಯರಿಂಗ್ ಮತ್ತು ಎಫ್ಡಿಎಂ(ವಿಮಾನದ ದತ್ತಾಂಶ ಮೇಲ್ವಿಚಾರಣೆ) ಕಾರ್ಯಕ್ರಮವನ್ನು ಪರಿಶೀಲನೆ ನಡೆಸಲಾಗಿದೆ ಎಂದು ಡಿಜಿಸಿಎ ಹೇಳಿದೆ.

ವಿಶೇಷ ಲೆಕ್ಕಪರಿಶೋಧನೆಯ ಸಮಯದಲ್ಲಿ, ಇಂಡಿಗೊದ ಕಾರ್ಯಾಚರಣೆಗಳು/ತರಬೇತಿ ಕಾರ್ಯವಿಧಾನಗಳು ಮತ್ತು ಎಂಜಿನಿಯರಿಂಗ್ ಕಾರ್ಯವಿಧಾನಗಳಿಗೆ ಸಂಬಂಧಿಸಿದ ದಾಖಲಾತಿಗಳಲ್ಲಿ ಕೆಲವು ವ್ಯವಸ್ಥಿತ ನ್ಯೂನತೆಗಳನ್ನು ಗಮನಿಸಲಾಗಿದೆ ಎಂದು ಅದು ಹೇಳಿದೆ.

ಈ ಕುರಿತಂತೆ ವೈಮಾನಿಕ ಸಂಸ್ಥೆಯು ಡಿಜಿಸಿಎ ನೀಡಿದ್ದ ಶೋಕಾಸ್ ನೋಟಿಸ್ಗೆ ಪ್ರತಿಕ್ರಿಯೆ ನೀಡಿದ್ದು, ಅದು ತೃಪ್ತಿಕರವಾಗಿಲ್ಲ, ಹಾಗಾಗಿ ₹30 ಲಕ್ಷ ದಂಡ ವಿಧಿಸಲಾಗಿದ್ದು, ಡಿಜಿಸಿಎ ಮಾನದಂಡಗಳಿಗೆ ಅನುಗುಣವಾಗಿ ಕೆಲ ತಿದ್ದುಪಡಿಗಳನ್ನು ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಡಿಜಿಸಿಎ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.