ನವದೆಹಲಿ: ‘ಕೇಂದ್ರ ಸರ್ಕಾರ ನಡೆಸಲಿರುವ ಜನಗಣತಿಗೆ ನಾಗಕರಿಕರು ಸ್ವಯಂ ದತ್ತಾಂಶ ದಾಖಲಿಸುವ ಸೌಕರ್ಯ ಒದಗಿಸುವಂತಹ ವೆಬ್ ಪೋರ್ಟಲ್ ಸಿದ್ಧಗೊಳ್ಳುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿಯೇ ಮೊದಲ ಬಾರಿಗೆ ಡಿಜಿಟಲ್ ಗಣತಿ ನಡೆಯಲಿದ್ದು, ಗಣತಿದಾರರು ನಾಗರಿಕರ ಮಾಹಿತಿಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ದಾಖಲಿಸಲಿದ್ದಾರೆ.

ಮನೆಗಳ ಪಟ್ಟಿ ಹಾಗೂ ಮನೆಗಳ ಗಣತಿ (ಎಚ್ಎಲ್ಒ) ಮತ್ತು ಜನಗಣತಿಯ (ಪಿಇ) ಸಂದರ್ಭದಲ್ಲಿಯೂ ಇಂತಹುದೇ ಅವಕಾಶ ನಾಗರಿಕರಿಗೆ ಸಿಗಲಿದೆ.

‘ಡಿಜಿಟಲ್ ಗಣತಿಯು ಪರಿವರ್ತನೆಯ ಹೆಜ್ಜೆಯಾಗಿದೆ. ದತ್ತಾಂಶಗಳನ್ನು ಸಂಗ್ರಹಿಸಿ, ಎಲೆಕ್ಟ್ರಾನಿಕ್ ಮಾದರಿಯಲ್ಲಿ ಕೇಂದ್ರೀಕೃತ ಸರ್ವರ್ಗೆ ವರ್ಗಾಯಿಸಲಾಗುತ್ತದೆ. ಇದರಿಂದ ಗಣತಿ ದತ್ತಾಂಶಗಳನ್ನು ಕಡಿಮೆ ಅವಧಿಯಲ್ಲಿ ಕ್ರೋಡೀಕರಿಸಲು ಸಾಧ್ಯವಾಗಲಿದೆ’ ಎಂದು ಅವರು ವಿವರಿಸಿದರು.

ದತ್ತಾಂಶ ಸಂಗ್ರಹ, ವರ್ಗಾವಣೆ ಹಾಗೂ ಶೇಖರಣೆ ವೇಳೆ ಅತ್ಯಂತ ಕಟ್ಟುನಿಟ್ಟಾಗಿ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗುವುದು.

ಈ ಹಿಂದೆ ಗಣತಿ ಪ್ರಕ್ರಿಯೆ ನಡೆದ ಎರಡರಿಂದ ಮೂರು ವರ್ಷಗಳ ಬಳಿಕ ದತ್ತಾಂಶಗಳನ್ನು ಸಾರ್ವಜನಿಕರ ಮುಂದೆ ಇಡಲಾಗುತ್ತಿತ್ತು. ಡಿಜಿಟಲ್ ದತ್ತಾಂಶ ಸಂಗ್ರಹದಿಂದ ಕೆಲವೇ ತಿಂಗಳಲ್ಲಿ ಜನರಿಗೆ ಮಾಹಿತಿ ದೊರಕಲಿದೆ.

ಮನೆಗಳ ಗಣತಿ ಪ್ರಕ್ರಿಯೆಯು 2026ರ ಏಪ್ರಿಲ್ 1ರಿಂದ ಆರಂಭಗೊಳ್ಳಲಿದ್ದು, 2027ರ ಫೆಬ್ರುವರಿ 1ರಿಂದ ನಡೆಯುವ ಎರಡನೇ ಹಂತದಲ್ಲಿ ಜನಗಣತಿ ಪ್ರಕ್ರಿಯೆಯೂ ನಡೆಯಲಿದೆ. ಈ ವೇಳೆ ಜಾತಿವಾರು ಗಣತಿ ಪ್ರಕ್ರಿಯೆಯೂ ನಡೆಯಲಿದೆ.

‘ನಿಯಾಮವಳಿಗಳ ಪ್ರಕಾರ, ಗಡುವು ಗೊತ್ತುಪಡಿಸಿದ ದಿನದಿಂದ ಮೂರು ತಿಂಗಳ ಒಳಗಾಗಿ ಗಣತಿ ಪ್ರಕ್ರಿಯೆ ಮುಗಿಯಲಿದೆ. ಜಿಲ್ಲೆ, ಉಪ ವಿಭಾಗ, ತಾಲ್ಲೂಕು ಹಾಗೂ ಪೊಲೀಸ್ ಠಾಣಾ ವ್ಯಾಪ್ತಿವಾರು ವಿಭಜಿಸಿ ಗಣತಿ ಪ್ರಕ್ರಿಯೆ ನಡೆಸಲಾಗುತ್ತದೆ. 2026ರ ಏಪ್ರಿಲ್ 1ರಿಂದ ಮನೆಗಳ ಪಟ್ಟಿ ಮಾಡುವ ಕೆಲಸ ಆರಂಭಗೊಳ್ಳಲಿದ್ದು, ಮೇಲ್ವಿಚಾರಕರು, ಗಣತಿದಾರರ ಕೆಲಸಗಳ ಹಂಚಿಕೆ ಪ್ರಕ್ರಿಯೆ ನಡೆಯಲಿದೆ’ ಎಂದು ಭಾರತದ ರಿಜಿಸ್ಟಾರ್ ಜನರಲ್, ಗಣತಿ ಆಯುಕ್ತರಾದ ಮೃತ್ಯುಂಜಯ್ ಕುಮಾರ್ ನಾರಾಯಣ್ ತಿಳಿಸಿದ್ದಾರೆ.

ಬಹು ಆಯಾಮದ ತರಬೇತಿ ಜಾಗೃತಿ

‘ಮೂರು ಹಂತಗಳಲ್ಲಿ ಕೇಂದ್ರೀಕೃತ ಹಾಗೂ ಅಗತ್ಯ ತರಬೇತಿಯನ್ನು ನೀಡಲು ರಾಷ್ಟ್ರೀಯ ಟ್ರೇನರ್ ಮಾಸ್ಟರ್ ಹಾಗೂ ಫೀಲ್ಡ್ ಟ್ರೇನರ್ಗಳನ್ನು ನಿಯೋಜಿಸಲಾಗುವುದು. ಪೀಲ್ಡ್ ಟ್ರೇನರ್ಗಳು 34 ಲಕ್ಷ ತರಬೇತುದಾರರನ್ನು ಅಣಿಗೊಳಿಸಲಿದ್ದಾರೆ’ ಎಂದು ಮೃತ್ಯುಂಜಯ್ ಕುಮಾರ್ ನಾರಾಯಣ್ ತಿಳಿಸಿದ್ದಾರೆ. ‘ಗಣತಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ದೇಶದಾದ್ಯಂತ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ಕೊನೆಯ ಹಂತದವರೆಗೂ ಜನರ ಸಹಭಾಗಿತ್ವ ಹಾಗೂ ನೆರವು ಪಡೆಯಲು ಸಾಧ್ಯ. ನಿಖರ ಅಧಿಕೃತ ಹಾಗೂ ಸಕಾಲಿತ ಮಾಹಿತಿ ಕಲೆಹಾಕುವ ಗಣತಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುವ ಗುರಿ ಹೊಂದಲಾಗಿದೆ’ ಎಂದು ವಿವರಿಸಿದ್ದಾರೆ.

ಪ್ರತಿ ಗ್ರಾಮ ಹಾಗೂ ಪಟ್ಟಣವನ್ನು ಏಕರೂಪದ ಏಣಿಕೆ ಬ್ಲಾಕ್ಗಳಾಗಿ ವಿಂಗಡಿಸಲಾಗುತ್ತದೆ. ಇದರಿಂದ ಗಣತಿದಾರರು ಗಣತಿ ಬಿಟ್ಟು ಹೋಗುವ ಹಾಗೂ ಗಣತಿ ಪುನರಾವರ್ತನೆ ತಪ್ಪಿಸಬಹುದಾಗಿದೆ.
-ಮೃತ್ಯುಂಜಯ್ ಕುಮಾರ್ ನಾರಾಯಣ್, ರಿಜಿಸ್ಟಾರ್ ಜನರಲ್ ಗಣತಿ ಆಯುಕ್ತರು ಭಾರತ ಸರ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.