ನವದೆಹಲಿ: ನೆಲದ ಮೇಲೆ ಕುಳಿತುಕೊಳ್ಳುವ ತಳಮಟ್ಟದ ಕಾರ್ಯಕರ್ತರು ಸಂಘ ಪರಿವಾರ ಮತ್ತು ಬಿಜೆಪಿಯ ರಾಜಕೀಯ ಪರಿಸರದಲ್ಲಿ ಹೇಗೆ ಬೆಳೆದು ಮುಖ್ಯಮಂತ್ರಿ ಮತ್ತು ಪ್ರಧಾನಿ ಆಗಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ನಿದರ್ಶನ ಎಂದು ಕಾಂಗ್ರೆಸ್ನ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಶ್ಲಾಘಿಸಿದ್ದಾರೆ.

ಇದಕ್ಕೆ ಪೂರಕವಾಗಿ ಅವರು, 1990ರ ದಶಕದಲ್ಲಿ ಗುಜರಾತಿನ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರ ಮುಂದೆ ನೆಲದ ಮೇಲೆ ಕುಳಿತಿದ್ದ ನರೇಂದ್ರ ಮೋದಿ ಅವರ ಕಪ್ಪು ಬಿಳುಪಿನ ಫೋಟೊವನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ನಲ್ಲಿ ಆಂತರಿಕವಾಗಿ ಸುಧಾರಣೆಗಳ ಅಗತ್ಯವಿದೆ ಎಂದು ಪ್ರತಿಪಾದಿಸಿ ದಿಗ್ವಿಜಯ್ ಸಿಂಗ್ ಅವರು ವಾರದ ಹಿಂದೆಯಷ್ಟೇ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ ಆರ್ಎಸ್ಎಸ್ ಮತ್ತು ಬಿಜೆಪಿಯನ್ನು ಹೊಗಳಿ ಅವರು ಮಾಡಿರುವ ಪೋಸ್ಟ್ ವಿವಾದ ಹುಟ್ಟುಹಾಕಿದೆ.

‘ಇದು ಮನಮುಟ್ಟುವ ಚಿತ್ರವಾಗಿದ್ದು, ಆರ್ಎಸ್ಎಸ್ನ ತಳಮಟ್ಟದ ಸ್ವಯಂ ಸೇವಕರು ಮತ್ತು ಜನಸಂಘದ ಕಾರ್ಯಕರ್ತರು ತಮ್ಮ ನಾಯಕರ ಪಾದಗಳ ಬಳಿ, ನೆಲದ ಮೇಲೆ ಕುಳಿತುಕೊಂಡು ಪ್ರೀತಿ, ಗೌರವ ವ್ಯಕ್ತಪಡಿಸುವುದನ್ನು ತೋರಿಸುತ್ತದೆ. ನಂತರ ಅವರು ಶ್ರಮದಿಂದ ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿಯೂ ಬೆಳೆಯುತ್ತಾರೆ ಎಂಬುದನ್ನು ಈ ಫೋಟೊ ಬಿಂಬಿಸುತ್ತದೆ. ಇದು ಸಂಘಟನೆಯ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ, ಜೈ ಸಿಯಾ ರಾಮ್’ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಸಿಂಗ್ ಪೋಸ್ಟ್ನಲ್ಲಿ ಹೇಳಿದ್ದಾರೆ.

ಸಿಂಗ್ ಅವರ ಈ ಪೋಸ್ಟ್ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಸ್ಪಷ್ಟೀಕರಣ ನೀಡಿರುವ ಅವರು, ‘ನಾನು ಸಂಘಟನೆಯನ್ನಷ್ಟೇ ಹೊಗಳಿದ್ದೇನೆ. ಆದರೆ ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ವಿರೋಧಿಸುವುದನ್ನು ಮುಂದುವರಿಸುತ್ತೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಇದು ‘ಸತ್ಯದ ಬಾಂಬ್’– ಬಿಜೆಪಿ:

ಸಿಂಗ್ ಅವರ ಈ ಪೋಸ್ಟ್ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡಿದೆ. ಅದು ನಿರಂಕುಶಾಧಿಕಾರ ಮತ್ತು ಪ್ರಜಾಪ್ರಭುತ್ವ ವಿರೋಧಿ ಕಾಂಗ್ರೆಸ್ ನಾಯಕತ್ವವನ್ನು ಬಹಿರಂಗಪಡಿಸಿದೆ. ದಿಗ್ವಿಜಯ್ ಅವರ ಈ ‘ಸತ್ಯದ ಬಾಂಬ್’ಗೆ ರಾಹುಲ್ ಪ್ರತಿಕ್ರಿಯಿಸುವ ಧೈರ್ಯ ತೋರುತ್ತಾರೆಯೇ ಎಂದು ಬಿಜೆಪಿ ವಕ್ತಾರ ಸಿ.ಆರ್. ಕೇಶವನ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ನ ಮೊದಲ ಕುಟುಂಬವು ಪಕ್ಷವನ್ನು ಹೇಗೆ ನಿರ್ದಯವಾಗಿ ಸರ್ವಾಧಿಕಾರಿ ರೀತಿಯಲ್ಲಿ ನಡೆಸಿಕೊಂಡಿದೆ ಎಂಬುದನ್ನು ಈ ಪೋಸ್ಟ್ ಬಹಿರಂಗಪಡಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಸಿಂಗ್ ಅವರು ತಮ್ಮ ಈ ಪೋಸ್ಟ್ ಅನ್ನು ಕಾಂಗ್ರೆಸ್ನ ಸಾಮಾಜಿಕ ಮಾಧ್ಯಮ ಖಾತೆಗಳಿಗೆ, ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ‘ಟ್ಯಾಗ್’ ಮಾಡಿದ್ದಾರೆ. ಈ ಮೂಲಕ ಅವರು ಹೈಕಮಾಂಡ್ಗೆ ಸಂದೇಶ ರವಾನಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.

ಎರಡನೇ ಬಾರಿ ರಾಜ್ಯಸಭಾ ಸಂಸದರಾಗಿರುವ ದಿಗ್ವಿಜಯ್ ಸಿಂಗ್ ಅವರ ಅಧಿಕಾರಾವಧಿ 2026ರ ಆರಂಭದಲ್ಲಿ ಕೊನೆಗೊಳ್ಳಲಿದೆ. ಅವರು ಮೂರನೇ ಅವಧಿಗೆ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಈಗಾಗಲೇ ಕಮಲನಾಥ್ ಮತ್ತು ಮೀನಾಕ್ಷಿ ನಟರಾಜನ್ ಅವರು ಈ ಸ್ಥಾನಕ್ಕಾಗಿ ಪೈಪೋಟಿಯಲ್ಲಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿಂಗ್ ಅವರ ನಡೆಯನ್ನು ಗುರುತಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ಮೋದಿ ಉದಯ ದಾಖಲಿಸುವ ಚಿತ್ರ

ಸಿಂಗ್ ಅವರು ಹಂಚಿಕೊಂಡಿರುವ ಈ ಫೋಟೊ 1990ರ ದಶಕದಲ್ಲಿ ಗುಜರಾತ್ ರಾಜಕೀಯದಲ್ಲಿ ಮೋದಿ ಅವರ ಉದಯವನ್ನು ದಾಖಲಿಸುವ ಮಹತ್ವದ ದೃಶ್ಯವಾಗಿದೆ. ಅದು 1996ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿ ಶಂಕರ್ಸಿನ್ಹ ವಘೇಲ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸೆರೆಹಿಡಿದ ಚಿತ್ರವಾಗಿದೆ ಎಂದು ವರದಿಯಾಗಿದೆ.

‘ರಾಹುಲ್ ಮನವೊಲಿಸುವುದು ಸುಲಭವಲ್ಲ’

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಡಿ. 19ರಂದು ಪತ್ರ ಬರೆದಿದ್ದ ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್ನೊಳಗೆ ಸುಧಾರಣೆಗಳು ಆಗಬೇಕಿವೆ ಎಂದು ಪ್ರತಿಪಾದಿಸಿದ್ದರು. ‘ಪಕ್ಷಕ್ಕೆ ಹೆಚ್ಚು ಪ್ರಾಯೋಗಿಕ ವಿಕೇಂದ್ರೀಕೃತ ಕಾರ್ಯ ನಿರ್ವಹಣೆಯ ಅಗತ್ಯವಿದೆ. ಅದನ್ನು ನೀವು ಮಾಡುತ್ತೀರಿ ಎಂಬ ವಿಶ್ವಾಸವಿದೆ. ಆದರೆ ಸಮಸ್ಯೆ ಏನೆಂದರೆ ನಿಮ್ಮನ್ನು ಮನವೊಲಿಸುವುದು ಸುಲಭವಲ್ಲ’ ಎಂದಿದ್ದರು. ಅದನ್ನು ಅವರು ಪೋಸ್ಟ್ನಲ್ಲೂ ಉಲ್ಲೇಖಿಸಿದ್ದಾರೆ. ‘ರಾಹುಲ್ ಗಾಂಧಿ ಅವರು ದೇಶದಾದ್ಯಂತ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಆದರೆ ಅವರ ಪಕ್ಷದೊಳಗೆ ಪ್ರಜಾಪ್ರಭುತ್ವ ಎಷ್ಟು ಚಾಲ್ತಿಯಲ್ಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಬಿಜೆಪಿ ಕಿಡಿಕಾರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.