ಚೆನ್ನೈ: ತ್ರಿಭಾಷಾ ಸೂತ್ರದ ಹೆಸರಿನಲ್ಲಿ ನಡೆಯುತ್ತಿರುವ ಹಿಂದಿ ಹೇರಿಕೆ, ಸಮಗ್ರ ಶಿಕ್ಷಣ ಯೋಜನೆ (ಎಸ್ಎಸ್) ಅನ್ವಯ ನೀಡಬೇಕಿದ್ದ ಅನುದಾನದ ತಡೆ ಹಾಗೂ ಒಕ್ಕೂಟ ವ್ಯವಸ್ಥೆ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತಲು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ ನಿರ್ಧರಿಸಿದೆ.

ಡಿಎಂಕೆ ಮುಖ್ಯಸ್ಥ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಡಿಎಂಕೆ ಸಂಸದರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಮ್ಮು–ಕಾಶ್ಮೀರದ ರಾಜ್ಯ ಸ್ಥಾನಮಾನ ಪುನಸ್ಥಾಪನೆಯ ವಿಳಂಬ ಹಾಗೂ ಬಿಹಾರದ ಮತದಾರರ ಪಟ್ಟಿ ಸಮಗ್ರ ಪರಿಶೀಲನೆ ವಿಚಾರದ ಕುರಿತೂ ಅಧಿವೇಶನದಲ್ಲಿ ಪ್ರಸ್ತಾಪಿಸಲು ಸಿದ್ಧತೆ ನಡೆದಿದೆ.

ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಶೇಕಡ 50ರಷ್ಟು ಪಾಲು ನೀಡಬೇಕು ಹಾಗೂ ಶ್ರೀಲಂಕಾ ನೌಕಾಪಡೆಯಿಂದ ತಮಿಳುನಾಡು ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕೆಂದೂ ಎಂದು ಡಿಎಂಕೆ ಸಂಸದರು ಆಗ್ರಹಿಸಲಿದ್ದಾರೆ.

ಅಲ್ಲದೇ, ತಿರುಕ್ಕುರಳ್ ಅನ್ನು ರಾಷ್ಟ್ರೀಯ ಪುಸ್ತಕವೆಂದು ಘೋಷಿಸಲು ಮತ್ತು ಶಿಕ್ಷಣವನ್ನು ಸಂವಿಧಾನದ ರಾಜ್ಯ ಪಟ್ಟಿಯ ವ್ಯಾಪ್ತಿಗೆ ಮರಳಿ ತರಬೇಕು, ಕೇಂದ್ರದ ಯೋಜನೆಗಳಿಗೆ ಇಂಗ್ಲಿಷ್ನಲ್ಲಿ ಹೆಸರಿಡಲು ಆಗ್ರಹಿಸಬೇಕು ಎಂಬ ನಿರ್ಣಯವನ್ನೂ ಸಭೆಯಲ್ಲಿ ಅಂಗೀಕರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.