ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬದ ತಿಂಗಳ ಖರ್ಚು ಎರಡುಪಟ್ಟು ಹೆಚ್ಚಳ: ಸಮೀಕ್ಷೆ

Published 25 ಫೆಬ್ರುವರಿ 2024, 15:46 IST
Last Updated 25 ಫೆಬ್ರುವರಿ 2024, 15:46 IST
ಅಕ್ಷರ ಗಾತ್ರ

ನವದೆಹಲಿ: ‘ದೈನಂದಿನ ಮನೆ ಬಳಕೆ ವಸ್ತುಗಳಿಗಾಗಿ ತಿಂಗಳೊಂದರಲ್ಲಿ ಕುಟುಂಬವೊಂದು ಮಾಡುವ ವೆಚ್ಚವು ಕಳೆದ 10 ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಾಗಿದೆ’ ಎಂದು ಕೇಂದ್ರ ಸರ್ಕಾರವು ನಡೆಸಿದ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.

ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಡಿಯಲ್ಲಿ ಬರುವ ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಆಫೀಸ್‌ (ಎನ್‌ಎಸ್‌ಎಸ್‌ಒ) ಈ ಸಮೀಕ್ಷೆಯನ್ನು ನಡೆಸಿದೆ. 2011–12 ಹಾಗೂ 2022–23 ಆರ್ಥಿಕ ವರ್ಷಗಳ ಹೋಲಿಕೆಯಲ್ಲಿ ಅಂಕಿಅಂಶಗಳನ್ನು ಸಿದ್ಧಪಡಿಸಲಾಗಿದೆ.

‘ಮನೆಯೊಂದರ ಬಳಕೆ ವೆಚ್ಚ ಸಮೀಕ್ಷೆ (ಎಚ್‌ಸಿಎಎಸ್‌) 2022–23’ ಸಮೀಕ್ಷೆಯ ಹೆಸರು. 2022ರ ಆಗಸ್ಟ್‌ನಿಂದ 2023ರ ಜುಲೈವರೆಗೆ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಮನೆ ನಿರ್ವಹಣೆಗಾಗಿ ಮನೆಯೊಂದು ತಿಂಗಳಿಗೆ ಎಷ್ಟು ವೆಚ್ಚ ಮಾಡುತ್ತದೆ ಎನ್ನುವುದನ್ನು ತಿಳಿಯುವುದು ಈ ಸಮೀಕ್ಷೆಯ ಮುಖ್ಯ ಉದ್ದೇಶ. ನಗರ ಪ್ರದೇಶ, ಗ್ರಾಮೀಣ ಪ್ರದೇಶ ಎನ್ನುವ ಎರಡು ಪ್ರತ್ಯೇಕ ವಿಂಗಡಣೆಯನ್ನು ಸಮೀಕ್ಷೆಯಲ್ಲಿ ಮಾಡಿಕೊಳ್ಳಲಾಗಿದೆ. ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲೂ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಎಲ್ಲ ಸಾಮಾಜಿಕ–ಆರ್ಥಿಕ ವರ್ಗದ ಕುಟುಂಬಗಳನ್ನೂ ಇಲ್ಲಿ ಮಾತನಾಡಿಸಲಾಗಿದೆ.

ಸಮೀಕ್ಷೆ ಏನು ಹೇಳುತ್ತದೆ

ನಗರ ಪ್ರದೇಶದಲ್ಲಿ ಸರಾಸರಿ ವೆಚ್ಚ

2011–12;₹2,630

2022–23;₹6,459

ಗ್ರಾಮೀಣ ಪ್ರದೇಶದಲ್ಲಿ ಸರಾಸರಿ ವೆಚ್ಚ

2011–12;₹1,430

2022–23;₹3,773

ನಗರ ಪ್ರದೇಶದಲ್ಲಿ ತಿಂಗಳೊಂದರಲ್ಲಿ ಕುಟುಂಬವೊಂದು ಮಾಡುವ ಸರಾಸರಿ ವೆಚ್ಚ (2011–12ರ ಬೆಲೆಯ ಹೋಲಿಕೆಯಲ್ಲಿ) 

2011–12;₹2,630

2022–23;₹3,510

ಗ್ರಾಮೀಣ ಪ್ರದೇಶದಲ್ಲಿ ತಿಂಗಳೊಂದರಲ್ಲಿ ಕುಟುಂಬವೊಂದು ಮಾಡುವ ಸರಾಸರಿ ವೆಚ್ಚ (2011–12ರ ಬೆಲೆಯ ಹೋಲಿಕೆಯಲ್ಲಿ) 

2011–12;₹1,430

2022–23;₹2,008

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT