ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಪಾಕ್‌ ಗಡಿಯಲ್ಲಿ ಡ್ರೋನ್‌ ವಶಕ್ಕೆ

ಗಡಿಯಲ್ಲಿ ಹೆರಾಯಿನ್‌ ಕಳ್ಳಸಾಗಣೆ ಮಾಡಲು ಪಾಕಿಸ್ತಾನವು ಡ್ರೋನ್‌ ಬಳಸುತ್ತಿದೆ
Published 20 ನವೆಂಬರ್ 2023, 14:29 IST
Last Updated 20 ನವೆಂಬರ್ 2023, 14:29 IST
ಅಕ್ಷರ ಗಾತ್ರ

ಚಂಡೀಗಢ: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಪಂಜಾಬ್‌ನ ತರಣ್ ತಾರಣ್ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆಯ ಸೈನಿಕರು ಸೋಮವಾರ ಡ್ರೋನ್‌ವೊಂದನ್ನು ವಶಕ್ಕೆ ಪಡೆದಿದ್ದಾರೆ. 

ಕಳೆದ ಒಂದು ವಾರದಲ್ಲಿ ಪಂಜಾಬ್‌ನ ವಿವಿಧೆಡೆಗಳಲ್ಲಿ ಬಿಎಸ್‌ಎಫ್‌ ಸಿಬ್ಬಂದಿ ವಶಪಡಿಸಿಕೊಂಡ ಎಂಟನೇ ಡ್ರೋನ್‌  ಇದಾಗಿದೆ. 

ಗಡಿಯಲ್ಲಿ ಹೆರಾಯಿನ್‌ ಕಳ್ಳಸಾಗಣೆ ಮಾಡಲು ಪಾಕಿಸ್ತಾನವು ಡ್ರೋನ್‌ ಬಳಸುತ್ತಿದೆ.

ಖಚಿತ ಮಾಹಿತಿ ಆಧರಿಸಿ ಬಿಎಸ್‌ಎಫ್‌ ಮತ್ತು ಪೊಲೀಸರು ತರಣ್‌ ತಾರಣ್‌ ಜಿಲ್ಲೆಯ ಮೆಹ್ದಿಪುರ ಗ್ರಾಮದಲ್ಲಿ ಸೋಮವಾರ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಚೀನಾ ನಿರ್ಮಿತ ಕ್ವಾಡ್‌ಕಾಪ್ಟರ್‌ (ಡ್ರೋನ್‌) ಅನ್ನು ಜಮೀನಿನಲ್ಲಿ ಪತ್ತೆ  ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.   

ಕಳೆದ ಒಂದು ವಾರದಲ್ಲಿ ಪಾಕಿಸ್ತಾನದ ಎಂಟು ಡ್ರೋನ್‌ಗಳನ್ನು ಹೊಡೆದುರುಳಿಸಿರುವ ಬಿಎಸ್‌ಎಫ್‌ ಸಿಬ್ಬಂದಿ 5 ಕೆ.ಜಿ ಹೆರಾಯಿನ್‌ ವಶಕ್ಕೆ ಪಡೆದಿದ್ದಾರೆ. 

 ಗಡಿಯಲ್ಲಿ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಬಳಸುತ್ತಿರುವ ಈ ಎಲ್ಲ ಡ್ರೋನ್‌ಗಳು ಚೀನಾ ನಿರ್ಮಿತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT