ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಡ್ರೋನ್, ಚಾಲಕ ರಹಿತ ವಿಮಾನ ಹೊಂದುವುದು, ಮಾರಾಟ ಮತ್ತು ಬಳಕೆಗೆ ನಿಷೇಧಹೇರಿದೆ.ವಾರದ ಹಿಂದೆ ಜಮ್ಮುವಿನ ವಿಮಾನ ನಿಲ್ದಾಣದಲ್ಲಿ ನಡೆದ ಡ್ರೋನ್ ದಾಳಿಯಿಂದ ಇಬ್ಬರು ವಾಯಪಡೆಯ ಸಿಬ್ಬಂದಿ ಗಾಯಗೊಂಡನಂತರಈ ಬೆಳವಣಿಗೆ ನಡೆದಿದೆ.

ವೈಮಾನಿಕ ಪ್ರದೇಶ ಮತ್ತು ಹೆಚ್ಚು ಜನರಿರುವ ಪ್ರದೇಶಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಡ್ರೋನ್‌ನಂತಹ ಹಾರಾಟದ ವಾಹನಗಳನ್ನು ನಿರ್ಬಂಧಿಸಲಾಗಿದೆ. ಸಭೆ, ಸಮಾರಂಭಗಳಲ್ಲಿ ಯಾವುದೇ ದುರ್ಘಟನೆಗಳು ಸಂಭವಿಸದಂತೆ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶ್ರೀನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೊಹಮ್ಮದ್ ಐಜಾಜ್ ಹೇಳಿದ್ದಾರೆ.

ಡ್ರೋನ್ ಕ್ಯಾಮರಾಗಳು ಸೇರಿದಂತೆ ಚಾಲಕ ರಹಿತ ವಿಮಾನಗಳನ್ನು ಹೊಂದಿರುವವರು ಸ್ಥಳೀಯ ಪೊಲೀಸ್ ಠಾಣೆಗೆ ತಂದು ಒಪ್ಪಿಸಬೇಕು ಎಂದು ಐಜಾಜ್ ಸೂಚನೆ ನೀಡಿದ್ದಾರೆ. ಆದರೆ ಸರ್ಕಾರದ ಸೇವೆಯಲ್ಲಿರುವ ನಕ್ಷೆ ಸೂಚಕ, ಕೃಷಿ ಸಮೀಕ್ಷೆ, ಹವಾಮಾನ ಸಮೀಕ್ಷೆ ಮತ್ತಿತರ ಕೆಲಸಗಳಿಗೆ ಬಳಕೆ ಮಾಡುವ ಡ್ರೋನ್‌ಗಳಿಗೆ ನಿರ್ಬಂಧವಿಲ್ಲ ಎಂದು ಜಿಲ್ಲಾಡಳಿತ ಸೂಚಿಸಿದೆ.

ಜಮ್ಮು ದಾಳಿಯ ನಂತರ ರಜೌರಿ, ಕಥುವಾ ಪ್ರದೇಶಗಳಲ್ಲಿ ಅಲ್ಲಿನ ಸ್ಥಳೀಯಆಡಳಿತವು ಡ್ರೋನ್‌ಗಳ ಮೇಲೆ ನಿಷೇಧ ಹೇರಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಎರಡು ಡ್ರೋನ್ ಪತ್ತೆ: ಸೇನೆಯಿಂದ ಗುಂಡಿನ ದಾಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.