ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Earthquake: ಗುಜರಾತ್‌ನ ಕಛ್‌‌‌ನಲ್ಲಿ 4.1 ತೀವ್ರತೆಯ ಭೂಕಂಪ

Published 1 ಫೆಬ್ರುವರಿ 2024, 4:19 IST
Last Updated 1 ಫೆಬ್ರುವರಿ 2024, 4:19 IST
ಅಕ್ಷರ ಗಾತ್ರ

ನವದೆಹಲಿ: ಗುಜರಾತ್‌ನ ಕಛ್‌‌ ಜಿಲ್ಲೆಯಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಮಧ್ಯಮ ತೀವ್ರತೆಯ ಭೂಕಂಪ ಸಂಭವಿಸಿದೆ. ಕಂಪನದ ಕೇಂದ್ರ ಬಿಂದು 15 ಕಿ.ಮೀ. ಆಳದಲ್ಲಿ ಇತ್ತು ಎಂದು ಅದು ತಿಳಿಸಿದೆ.

ಅತಿ ಹೆಚ್ಚಿನ ಭೂಕಂಪದ ಅಪಾಯ ವಲಯದಲ್ಲಿರುವ ಕಛ್‌‌ ಪ್ರದೇಶದಲ್ಲಿ 2001ರಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ಅಂದು 10 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ಅಪಾರ ಪ್ರಮಾಣದ ನಷ್ಟ ಸಂಭವಿಸಿತ್ತು.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು (ಎನ್‌ಸಿಎಸ್) ದೇಶದಲ್ಲಿ ಸಂಭವಿಸುವ ಭೂಕಂಪದ ಚಟುವಟಿಕೆಗಳನ್ನು ಪತ್ತೆ ಮಾಡಲು ಇರುವ ಭಾರತ ಸರ್ಕಾರದ ಸಂಸ್ಥೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT