ನವದೆಹಲಿ: ‘ಹಲವು ರಾಜ್ಯಗಳಲ್ಲಿ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಕಾರ್ಯವನ್ನು ಮನಸ್ಸಿಗೆ ತೋಚಿದಂತೆ ನಡೆಸಲಾಗುತ್ತಿಲ್ಲ. ಈ ಪ್ರಕ್ರಿಯೆಯಿಂದ ತೊಂದರೆ ಎದುರಿಸುತ್ತಿರುವುದಾಗಿ ಹೇಳಿ ಈ ವರೆಗೆ ಯಾವೊಬ್ಬ ಮತದಾರನೂ ನ್ಯಾಯಾಲಯದ ಕದ ತಟ್ಟಿಲ್ಲ’ ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ಗೆ ಗುರುವಾರ ತಿಳಿಸಿದೆ.

‘ಎಸ್ಐಆರ್ ನಡೆಸುತ್ತಿರುವ ವೇಳೆ ಕೆಲವೆಡೆ ತಪ್ಪುಗಳಾಗಿರಬಹುದು. ಆದರೆ, ಇಡೀ ಪ್ರಕ್ರಿಯೆ ನ್ಯಾಯಸಮ್ಮತವಾಗಿಯೇ ನಡೆಯುತ್ತಿದೆ’ ಎಂದು ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ ಅವರು ಮುಖ್ಯನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠಕ್ಕೆ ತಿಳಿಸಿದರು.

‘ಎಸ್ಐಆರ್ಗೆ ಆಕ್ಷೇಪಿಸಿ ಅರ್ಜಿ ಸಲ್ಲಿಸಿರುವವರು ಯಾರು ಎಂಬುದನ್ನು ಗಮನಿಸಿ. ರಾಜಕೀಯ ಪಕ್ಷಗಳ ನಾಯಕರು, ಖಾಸಗಿ ವ್ಯಕ್ತಿಗಳು ಹಾಗೂ ಎನ್ಜಿಒಗಳು ಕೋರ್ಟ್ಗೆ ಅರ್ಜಿ ಸಲ್ಲಿಸಿವೆ. ತಾವು ಅನಾಮಧೇಯ ವ್ಯಕ್ತಿಗಳನ್ನು ಪ್ರತಿನಿಧಿಸುತ್ತಿದ್ದೇವೆ ಎನ್ನುವ ಮೂಲಕ ಇವರು ಕೋಲಾಹಲ ಸೃಷ್ಟಿಸುತ್ತಿದ್ದಾರೆ’ ಎಂದೂ ದ್ವಿವೇದಿ ಹೇಳಿದರು.

ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರೂ ಈ ಪೀಠದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.