ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಹಾರ ಆರೋಪ: ಸಿಪಿಎಂ ಮುಖಂಡ ಥಾಮಸ್‌ ಐಸಾಕ್‌ಗೆ ಇ.ಡಿ ಸಮನ್ಸ್‌

Published 7 ಜನವರಿ 2024, 13:34 IST
Last Updated 7 ಜನವರಿ 2024, 13:34 IST
ಅಕ್ಷರ ಗಾತ್ರ

ಕೊಚ್ಚಿ: ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿಯ (ಕಿಫ್‌ಬಿ) ಯೋಜನೆಯಲ್ಲಿ ನಡೆದಿದೆ ಎನ್ನಲಾದ  ಅವ್ಯವಹಾರಕ್ಕೆ ಸಂಬಂಧಿಸಿ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಿಪಿಎಂ ಮುಖಂಡ ಥಾಮಸ್‌ ಐಸಾಕ್‌ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ನೀಡಿದೆ.

ಕೊಚ್ಚಿಯಲ್ಲಿರುವ ಇ.ಡಿ. ಕಚೇರಿಗೆ ಇದೇ 12ರಂದು ಹಾಜರಾಗಿ ಹೇಳಿಕೆ ನೀಡುವಂತೆ ಥಾಮಸ್‌ ಅವರಿಗೆ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಥಾಮಸ್‌ ಅವರು ಎಲ್‌ಡಿಎಫ್‌ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗ ಈ ಅವ್ಯವಹಾರ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಥಾಮಸ್‌ ಅವರಿಗೆ ಈ ಹಿಂದೆ ನೀಡಿದ್ದ ಸಮನ್ಸ್‌ ಅನ್ನು ಹಿಂಪಡೆದಿರುವುದಾಗಿ ಇ.ಡಿ ಡಿಸೆಂಬರ್‌ನಲ್ಲಿ ಕೇರಳ ಹೈಕೋರ್ಟ್‌ಗೆ ಹೇಳಿತ್ತು. ಸಮನ್ಸ್ ಮೂಲಕ ಕೇವಲ ವೈಯಕ್ತಿಕ ಮಾಹಿತಿಗಳನ್ನು ಮಾತ್ರ ಇ.ಡಿ ಕೇಳಿದೆ ಎಂದು ಆರೋಪಿಸಿ ಥಾಮಸ್‌ ಮತ್ತು ಕಿಫ್‌ಬಿ ಅಧಿಕಾರಿಗಳು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯಿಸಿ ಇ.ಡಿ ಈ ಹೇಳಿಕೆ ನೀಡಿತ್ತು.

ಪ್ರಕರಣದ ತನಿಖೆಯನ್ನು ಇ.ಡಿ ಮುಂದುವರಿಸಬಹುದು ಎಂದು ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಹೇಳಿತ್ತು.

ತನಿಖೆ ಮುಂದುವರಿಸುವಂತೆ ಹೈಕೋರ್ಟ್‌ ಅನುಮತಿ ನೀಡಿರುವ ಕಾರಣ ಥಾಮಸ್‌ ಅವರಿಗೆ ಮತ್ತೆ ಸಮನ್ಸ್‌ ನೀಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ. ಫೆಮಾ ಕಾಯ್ದೆಯನ್ನು ಉಲ್ಲಂಘಿಸಿ ಮಸಾಲಾ ಬಾಂಡ್‌ಗಳ ಮೂಲಕ ಕಿಫ್‌ಬಿ ₹2,000 ಕೋಟಿ ಸಂಗ್ರಹಿಸಿತ್ತು ಎಂದು ಆರೋಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT