ಮುಂಬೈ: ಭಯೋತ್ಪಾದಕ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ಸಹಚರನ ಹೆಸರಿನಲ್ಲಿದ್ದ ₹55 ಲಕ್ಷ ಮೊತ್ತದ ಫ್ಲಾಟ್ ಅನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ.

ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ, ಮಹಾರಾಷ್ಟ್ರದ ಠಾಣೆಯಲ್ಲಿರುವ ಫ್ಲಾಟ್ ಅನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಶಕ್ಕೆ ಪಡೆದಿದೆ.

ಮುಮ್ತಾಜ್ ಎಜಾಜ್ ಶೇಖ್ ವಿರುದ್ಧ 2022ರಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಹೊರಡಿಸಲಾಗಿದ್ದ ತಾತ್ಕಾಲಿಕ ಆದೇಶದ ಭಾಗವಾಗಿ, ಠಾಣೆಯ ಪಶ್ಚಿಮದಲ್ಲಿರುವ ನಿಯೊಪೊಲೀಸ್ ಕಟ್ಟಡದಲ್ಲಿನ ಫ್ಲಾಟ್ನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಫ್ಲಾಟ್ ಅನ್ನು ಕಸ್ಕರ್ ಮತ್ತು ಇತರರು ಠಾಣೆ ಮೂಲದ ರಿಯಲ್ ಎಸ್ಟೇಟ್ ಡೆವಲಪರ್ ಸುರೇಶ್ ದೇವಿಚಂದ್ ಮೆಹ್ತಾ ಅವರಿಂದ ಬಲವಂತವಾಗಿ ಪಡೆದಿದ್ದಾರೆ ಎಂದು ಇ.ಡಿ ಈ ಹಿಂದೆ ಆರೋಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.