ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಛತ್ತೀಸಗಢ: ಸುಕ್ಮಾದಲ್ಲಿ 8 ನಕ್ಸಲರ ಶರಣಾಗತಿ

Published 2 ಜೂನ್ 2024, 16:18 IST
Last Updated 2 ಜೂನ್ 2024, 16:18 IST
ಅಕ್ಷರ ಗಾತ್ರ

ಸುಕ್ಮಾ: ಎಂಟು ಮಂದಿ ನಕ್ಸಲರು ಛತ್ತೀಸಗಢದ ಸುಕ್ಮಾ ಭದ್ರತಾಪಡೆ ಎದುರು ಜಿಲ್ಲೆಯಲ್ಲಿ ಭಾನುವಾರ ಶರಣಾಗತರಾದರು ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಪೈಕಿ ನಾಲ್ವರ ತಲೆಗಳಿಗೆ ಒಟ್ಟಾರೆ ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದಿದ್ದಾರೆ. 

ಹಿರಿಯ ಪೊಲೀಸ್‌ ಅಧಿಕಾರಿಗಳು ಮತ್ತು ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಎದುರು ನಕ್ಸಲರು ಶರಣಾದರು. ಆದಿವಾಸಿಗಳ ಮೇಲೆ ನಕ್ಸಲರು ನಡೆಸುತ್ತಿರುವ ದೌರ್ಜನ್ಯಗಳನ್ನು ನೋಡಿ ಮನನೊಂದು ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅವರು ಹೇಳಿದ್ದಾರೆ,

ನಕ್ಸಲ್ ಸಿದ್ಧಾಂತವು ಅಮಾನವೀಯ ಮತ್ತು ಟೊಳ್ಳು ಎಂದಿರುವ ಅವರು, ರಾಜ್ಯ ಸರ್ಕಾರದ ನಕ್ಸಲ್‌ ನಿಗ್ರಹ ನೀತಿ ಮತ್ತು ಸುಕ್ಮಾ ಪೊಲೀಸರ ನಕ್ಸಲ್ ಪುನರ್ವಸತಿ ಅಭಿಯಾನದಿಂದ ಪ್ರಭಾವಿತರಾಗಿ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.

ಶರಣಾಗತರಾದವರಲ್ಲಿ ಮೂವರು ಮಹಿಳೆಯರಿದ್ದಾರೆ. 

ಶರಣಗತರಾಗುವ ನಕ್ಸಲರಿಗೆ ಸರ್ಕಾರವು ತನ್ನ ಶರಣಾಗತಿ ಮತ್ತು ಪುರ್ವಸತಿ ನೀತಿಯಡಿ ಸೌಲಭ್ಯಗಳನ್ನು ಕಲ್ಪಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT