ನವದೆಹಲಿ: ಕಳೆದ ಆರು ವರ್ಷಗಳಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸದಿರುವುದು ಸೇರಿದಂತೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 474 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

ಆಗಸ್ಟ್ 9ರಂದು ಮೊದಲ ಹಂತದ ಪರಿಷ್ಕರಣೆಯಲ್ಲಿ ಚುನಾವಣಾ ಆಯೋಗವು 334 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು(ಆರ್ಯುಪಿಪಿ) ಪಟ್ಟಿಯಿಂದ ತೆಗೆದುಹಾಕಿತ್ತು.

‘ಎರಡನೇ ಹಂತದ ಪರಿಷ್ಕರಣೆಯಲ್ಲಿ 6 ವರ್ಷಗಳಿಂದ ನಿರಂತರವಾಗಿ ಚುನಾವಣೆಗಳಲ್ಲಿ ಸ್ಪರ್ಧಿಸದ ಆಧಾರದ ಮೇಲೆ ಸೆಪ್ಟೆಂಬರ್ 18ರಂದು 474 ಆರ್ಯುಪಿಪಿಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಹೀಗಾಗಿ, ಕಳೆದ 2 ತಿಂಗಳಲ್ಲಿ 808 ಆರ್ಯುಪಿಪಿಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ’ಎಂದು ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

ರಾಜಕೀಯ ಪಕ್ಷಗಳ ನೋಂದಣಿ ಮಾರ್ಗಸೂಚಿ ಪ್ರಕಾರ, ಒಂದು ಪಕ್ಷ ಸತತ 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಚುನಾವಣಾ ಆಯೋಗದ ನೋಂದಾಯಿತ ಪಕ್ಷಗಳ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.

ಚುನಾವಣಾ ಆಯೋಗದ ನೋಂದಾಯಿತ ಪಕ್ಷಗಳ ಪಟ್ಟಿಯಲ್ಲಿದ್ದ 2,520 ರಾಜಕೀಯ ಪಕ್ಷಗಳಲ್ಲಿ ಪರಿಷ್ಕರಣೆ ಬಳಿಕ 2,046 ಪಕ್ಷಗಳು ಉಳಿದಿವೆ.

ಈ ಪೈಕಿ 6 ಮಾನ್ಯತೆ ಪಡೆದ ರಾಷ್ಟ್ರೀಯ ರಾಜಕೀಯ ಪಕ್ಷಗಳು ಮತ್ತು 67 ರಾಜ್ಯ ಪಕ್ಷಗಳಿವೆ.
.ರಾಹುಲ್ ನಗರ ನಕ್ಸಲ್ ರೀತಿ ಮಾತನಾಡುತ್ತಿದ್ದಾರೆ: Gen Z ಪೋಸ್ಟ್ ಬಗ್ಗೆ ಫಡಣವೀಸ್.ರಾಹುಲ್ ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ: ರವಿಶಂಕರ್ ಪ್ರಸಾದ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.