ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಶಿರೋಮಣಿ ಅಕಾಲಿದಳ ಸೇರಿದ ಜಾಗೀರ್‌ ಕೌರ್‌ 

Published 14 ಮಾರ್ಚ್ 2024, 9:43 IST
Last Updated 14 ಮಾರ್ಚ್ 2024, 9:43 IST
ಅಕ್ಷರ ಗಾತ್ರ

ಚಂಡೀಗಢ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಜಿಪಿಸಿಯ ಮಾಜಿ ಮುಖ್ಯಸ್ಥೆ ಜಾಗೀರ್‌ ಕೌರ್‌  ಅವರು ಮತ್ತೆ ಶಿರೋಮಣಿ ಅಕಾಲಿದಳಕ್ಕೆ (ಎಸ್‌ಎಡಿ) ಗುರುವಾರ ಸೇರಿದ್ದಾರೆ. 

ಪಕ್ಷ ವಿರೋಧಿ ಚಟುವಟಿಕೆಗಳಿಂದಾಗಿ ಜಾಗೀರ್‌ ಕೌರ್‌  ಅವರನ್ನು ಕಳೆದ ವರ್ಷ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಇದೀಗ ಅವರು ಮರಳಿ ಪಕ್ಷಕ್ಕೆ ಸೇರಿದ್ದಾರೆ. ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ನೀಡುವ ಸಾಧ್ಯತೆಗಳಿವೆ. 

ಅಕಾಲಿದಳದ ಹಿರಿಯ ನಾಯಕರ ಸಮ್ಮುಖದಲ್ಲಿ ಕೌರ್‌ ಪಕ್ಷಕ್ಕೆ ಸೇರಿದ್ದಾರೆ.

ಕೌರ್ ಅವರು 1999, 2004 ಮತ್ತು 2020ರಲ್ಲಿ ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ (ಎಸ್‌ಜಿಪಿಸಿ) ಅಧ್ಯಕ್ಷರಾಗಿದ್ದರು. ಈ ಹಿಂದೆ ಅಕಾಲಿದಳ ಸರ್ಕಾರದಲ್ಲಿ ಸಚಿವೆಯಾಗಿ ಕೆಲಸ ಮಾಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT