ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಾಲ್ ಪ್ರಮಾಣಪತ್ರದ ಹೆಸರಲ್ಲಿ ಸುಲಿಗೆ: ಹಲಾಲ್ ಕೌನ್ಸಿಲ್‌ನ 4 ಪದಾಧಿಕಾರಿಗಳ ಬಂಧನ

Published 13 ಫೆಬ್ರುವರಿ 2024, 3:04 IST
Last Updated 13 ಫೆಬ್ರುವರಿ 2024, 3:04 IST
ಅಕ್ಷರ ಗಾತ್ರ

ಮುಂಬೈ: ಹಲಾಲ್ ಪ್ರಮಾಣಪತ್ರದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಮುಂಬೈನ ಹಲಾಲ್ ಕೌನ್ಸಿಲ್ ಆಫ್ ಇಂಡಿಯಾದ ನಾಲ್ವರು ಪದಾಧಿಕಾರಿಗಳನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಸೋಮವಾರ ಬಂಧಿಸಿದೆ.

ಉತ್ತರ ಪ್ರದೇಶದ ಎಸ್‌ಟಿಎಫ್ ಮೂಲಗಳ ಪ್ರಕಾರ, ಬಂಧಿತ ವ್ಯಕ್ತಿಗಳನ್ನು ಮೌಲಾನಾ ಮುದಾಸಿರ್, ಹಬೀಬ್ ಯೂಸುಫ್ ಪಟೇಲ್, ಅನ್ವರ್ ಖಾನ್ ಮತ್ತು ಮೊಹಮ್ಮದ್ ತಾಹಿರ್ ಎಂದು ಗುರುತಿಸಲಾಗಿದೆ.

ಗಮನಾರ್ಹವಾಗಿ, ಉತ್ತರ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಹಲಾಲ್ ಪ್ರಮಾಣಿಕೃತ ಉತ್ಪನ್ನಗಳ ತಯಾರಿಕೆ, ಮಾರಾಟ, ಸಂಗ್ರಹಣೆ ಮತ್ತು ವಿತರಣೆಯನ್ನು ನಿಷೇಧಿಸಿತ್ತು.

ಹಲಾಲ್ ಪ್ರಮಾಣಿಕರಣದ ಹೆಸರಿನಲ್ಲಿ ಹಣ ವಸೂಲಿ ಮಾಡಿದ ಕೆಲವು ಸಂಸ್ಥೆಗಳು, ಉತ್ಪಾದನಾ ಕಂಪನಿಗಳು, ಅವುಗಳ ಮಾಲೀಕರು ಮತ್ತು ಇತರ ವ್ಯಕ್ತಿಗಳ ವಿರುದ್ಧ ಲಖನೌದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT