ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ವರದಿಯು ಬಹಿರಂಗವಾದ ನಂತರದಲ್ಲಿ ಈ ಮಹಿಳೆಯು, ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆದರೆ ಆರೋಪಗಳನ್ನು ಪ್ರಕಾಶ್ ಅವರು ಅಲ್ಲಗಳೆದಿದ್ದಾರೆ. ಕಥೆಯು ಸಿನಿಮಾ ಮಾಡಲು ಸೂಕ್ತವಾಗಿಲ್ಲ ಎಂದು ಆ ಮಹಿಳೆಗೆ ಹೇಳಿದ ನಂತರ ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಪ್ರಕಾಶ್ ಹೇಳಿದ್ದಾರೆ.