ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ಫೈಲ್ಸ್‌: ಕೃತಿಕಾರ ಪ್ರಣವಾನಂದ ದಾಸ್ ವಿರುದ್ಧ ಪ್ರಕರಣ ದಾಖಲು

Published 28 ನವೆಂಬರ್ 2023, 11:01 IST
Last Updated 28 ನವೆಂಬರ್ 2023, 11:01 IST
ಅಕ್ಷರ ಗಾತ್ರ

ಇಂಫಾಲ: ಮಣಿಪುರ ಹಿಸಾಚಾರಕ್ಕೆ ಸಂಬಂಧಿಸಿದಂತೆ ರಚಿಸಲಾದ ‘ಮಣಿಪುರ ಫೈಲ್ಸ್‌’ ಕೃತಿಯ ರಚನೆಕಾರ ಪ್ರಣವಾನಂದ ದಾಸ್ ವಿರುದ್ಧ ಇಂಫಾಲ ಪೂರ್ವ ಜಿಲ್ಲೆಯ ಪೊರೊಂಪಾಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಸ್ಸಾಂನ ಸಿಲ್ಚಾರ್‌ ಮೂಲದ ಲೇಖಕ ಪ್ರಣಾವನಂದ ಅವರು ರಚಿಸಿರುವ ‘ಮಣಿಪುರ ಫೈಲ್ಸ್‌’ ಕೃತಿಯು ವಿವಿಧ ಗುಂಪುಗಳ ನಡುವೆ ದ್ವೇಷ ಸೃಷ್ಟಿಸುವಂತಿದೆ ಎಂದು ಯುವ ಹೋರಾಟಗಾರ ಲುವಾಂಗ್ಚಾ ಯು. ದೂರು ನೀಡಿದ್ದರು.

ಧರ್ಮ ಹಾಗೂ ಎರಡು ಧಾರ್ಮಿಕ ಗುಂಪುಗಳ ನಡುವೆ ವೈಷಮ್ಯ ಹುಟ್ಟುಹಾಕುವ, ಜನರ ನಂಬಿಕೆಗೆ ಧಕ್ಕೆ ತರುವ ಹಾಗೂ ಧರ್ಮದ ನಂಬಿಕೆಗಳನ್ನು ಅವಮಾನಿಸುವ ರೀತಿಯಲ್ಲಿ ಕೃತಿಯನ್ನು ರಚಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಮೈತೇಯಿ ಹಾಗೂ ಕುಕಿ ಸಮುದಾಯದ ನಡುವೆ ಕಳೆದ ಮೇ ತಿಂಗಳಿಂದ ಆರಂಭವಾದ ಹಿಂಸಾಚಾರದಲ್ಲಿ 180ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸಾವಿರಕ್ಕೂ ಹೆಚ್ಚು ಜನ ಮನೆ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT