ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಿಕ್ ಬಳಿ ಕಾರು–ಟ್ರಕ್ ಅಪಘಾತ: ಐವರು ಸಾವು

ಕಾರು ಮತ್ತು ಟ್ರಕ್ ನಡುವೆ ನಡೆದ ಅಪಘಾತದಲ್ಲಿ ಐವರು ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮನ್ಮಾಡ್–ಯೋಲಾ ರಸ್ತೆಯಲ್ಲಿ ನಡೆದಿದೆ.
Published 27 ನವೆಂಬರ್ 2023, 3:22 IST
Last Updated 27 ನವೆಂಬರ್ 2023, 3:22 IST
ಅಕ್ಷರ ಗಾತ್ರ

ನಾಸಿಕ್, ಮಹಾರಾಷ್ಟ್ರ: ಕಾರು ಮತ್ತು ಟ್ರಕ್ ನಡುವೆ ನಡೆದ ಅಪಘಾತದಲ್ಲಿ ಐವರು ಮೃತಪಟ್ಟಿರುವ ಘಟನೆ ಭಾನುವಾರ ರಾತ್ರಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮನ್ಮಾಡ್–ಯೋಲಾ ರಸ್ತೆಯಲ್ಲಿ ನಡೆದಿದೆ.

ಘಟನೆಯಲ್ಲಿ ಮೃತರಾದವರು ನಾಸಿಕ್ ನಗರದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ನಂದಗಾಂವ್ ತಾಲೂಕಿನ ಅಂಕೈಬಾರಿ ಶಿವಾರದ ಬಳಿ ಮಳೆ ಬರುತ್ತಿರುವ ಸಮಯದಲ್ಲಿ ಕಾರೊಂದು ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

ಮೃತರನ್ನು ಲಲಿತ್ ಸೋನವಾನೆ, ರೋಹಿತ್ ಧನವಂತೆ, ಆದಿತ್ಯ ಧನವಂತೆ, ಗಣೇಶ್ ಸೋನವಾನೆ ಮತ್ತು ಪ್ರತೀಕ್ ನಾಯಕ್ ಎಂದು ಗುರುತಿಸಲಾಗಿದೆ.

ಟ್ರಕ್ ಚಾಲಕನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ನಂದಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT