ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಡ: ನಕ್ಸಲರಿಂದ ಸ್ಫೋಟ, ನಾಲ್ವರು ಬಿಎಸ್‌ಎಫ್‌ ಯೋಧರಿಗೆ ಗಾಯ

Last Updated 14 ನವೆಂಬರ್ 2018, 6:57 IST
ಅಕ್ಷರ ಗಾತ್ರ

ರಾಯಪುರ:ಇಲ್ಲಿನಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳು ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಮಗ್ರಿ (ಐಇಡಿ) ಸ್ಫೋಟಗೊಂಡು ನಾಲ್ವರುಬಿಎಸ್‌ಎಫ್‌ ಯೋಧರು ಸೇರಿದಂತೆ ಆರು ಮಂದಿಗಾಯಗೊಂಡಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಬೆಳಿಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ಹಿರಿಯ ಉಪ ಪೊಲೀಸ್‌ ಅಧಿಕಾರಿ ಸುಂದರ್‌ ರಾಜ್‌ ತಿಳಿಸಿದ್ದಾರೆ.

ಜಿಲ್ಲಾ ಮೀಸಲುಭದ್ರತಾ ಪಡೆಯ ಒಬ್ಬ, ಬಿಎಸ್‌ಎಫ್‌ನ 414ನೇ ಬೆಟಾಲಿಯನ್‌ಗೆ ಸೇರಿದ ನಾಲ್ವರು ಸಿಬ್ಬಂದಿ ಹಾಗೂ ನಾಗರಿಕರೊಬ್ಬರು ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದೆ.

ಬಿಜಾಪುರ ರಾಜ್ಯಧಾನಿ ರಾಯಪುರದಿಂದ 450 ಕಿ.ಮೀ ದೂರದಲ್ಲಿದೆ. *

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT