ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಹಿಳಾ ಪ್ರತಿನಿಧಿಗಳು ಹೆಚ್ಚಳ

Last Updated 13 ಮಾರ್ಚ್ 2022, 18:57 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದವರಲ್ಲಿ 55 ವರ್ಷ ಹಾಗೂ ಅದಕ್ಕೂ ಮೇಲ್ಟಟ್ಟ ವಯಸ್ಸಿನ ಶಾಸಕರ ಸಂಖ್ಯೆ ಹೆಚ್ಚಳವಾಗಿದೆ. ಪಿಆರ್‌ಎಸ್‌ ವಿಶ್ಲೇಷಣೆ ಪ್ರಕಾರ, 55 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಾಸಕರ ಪ್ರಮಾಣ ಶೇ 64.7ರಿಂದ (2017) ಶೇ 59.5ಕ್ಕೆ ಇಳಿಕೆಯಾಗಿದೆ.

ಉತ್ತರಾಖಂಡ ವಿಧಾನಸಭೆಗೆ ಆಯ್ಕೆಯಾದ 55 ವರ್ಷದೊಳಗಿನ ಶಾಸಕರ ಪ್ರಮಾಣವು ಶೇ 61ರಿಂದ ಶೇ ಶೇ 51ಕ್ಕೆ ಇಳಿಕೆಯಾಗಿದೆ. ಮಣಿಪುರದಲ್ಲಿ ಈ ವಯೋಮಾನದ ಶಾಸಕರ ಪ್ರಮಾಣವು ಶೇ 71.7ರಿಂದ ಶೇ 55ಕ್ಕೆ ಕುಸಿದಿದೆ.

ಕಳೆದ ಅವಧಿಗೆ ಹೋಲಿಸಿದರೆ, ಈ ಬಾರಿ ಮೂರು ವಿಧಾನಸಭೆಗಳಿಗೆ ನೂತನವಾಗಿ ಆಯ್ಕೆಯಾದ ಮಹಿಳೆಯರ ಸಂಖ್ಯೆ ಹೆಚ್ಚಳವಾಗಿದೆ. ಉತ್ತರ ಪ್ರದೇಶದಲ್ಲಿ ಈ ಬಾರಿ 47 ಶಾಸಕಿಯರು ಗೆದ್ದು ಬಂದಿದ್ದಾರೆ. ಕಳೆದ ಬಾರಿ ಇವರ ಸಂಖ್ಯೆ 42 ಇತ್ತು. ಮಣಿಪುರದಲ್ಲಿಯೂ ಶಾಸಕಿಯರ ಸಂಖ್ಯೆ ದುಪ್ಪಟ್ಟಾಗಿದೆ. ಐದು ವರ್ಷಗಳ ಹಿಂದೆ ಇಬ್ಬರು ಶಾಸಕಿಯರು ವಿಧಾನಸಭೆಗೆ ಆರಿಸಿ ಬಂದಿದ್ದರು.

ಉತ್ತರ ಪ್ರದೇಶದಲ್ಲಿ ಪದವಿ ವಿದ್ಯಾರ್ಹತೆ ಹೊಂದಿರುವ ಶಾಸಕರ ಪ್ರಮಾಣವು ಶೇ 72.7ರಿಂದ ಶೇ 75.9ಕ್ಕೆ ಜಿಗಿದಿದೆ. ಆದರೆ, ಉತ್ತರಾಖಂಡದಲ್ಲಿ ಪದವಿ ವಿದ್ಯಾರ್ಹತೆಯ ಶಾಸಕರ ಪ್ರಮಾಣ ಶೇ 77ರಿಂದ ಶೇ 68ಕ್ಕೆ ಕುಸಿದಿದೆ. ಮಣಿಪುರದಲ್ಲಿ ಶೇ 76.6ರಷ್ಟು ಪದವೀಧರರುಗೆದ್ದುಬಂದಿದ್ದಾರೆ. ಇವರ ಪ್ರಮಾಣ 2017ರ ಚುನಾವಣೆಯಲ್ಲಿ ಶೇ 68.4ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT