ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಬ್ ಎಸೆತ: ಟಿಎಂಸಿಯ ಐವರು ಕಾರ್ಯಕರ್ತರಿಗೆ ಗಾಯ

ಬಾಂಬ್‌ಗಳನ್ನು ಎಸೆದ ಐಎಸ್‌ಎಫ್‌ ಬೆಂಬಲಿಗರು: ಆರೋಪ ನಿರಾಕರಣೆ
Published 31 ಮೇ 2024, 18:16 IST
Last Updated 31 ಮೇ 2024, 18:16 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗೋರ್‌ನಲ್ಲಿ ಐಎಸ್‌ಎಫ್‌ ಬೆಂಬಲಿಗರು ಬಾಂಬ್‌ಗಳನ್ನು ಎಸೆದಿದ್ದರಿಂದ, ತೃಣಮೂಲ ಕಾಂಗ್ರೆಸ್‌ನ ಐವರು ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಟಿಎಂಸಿ ಕಾರ್ಯಕರ್ತರು ಗುರುವಾರ ರಾತ್ರಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ.

ಗಾಯಗೊಂಡವರನ್ನು ಚಿಕಿತ್ಸೆಗಾಗಿ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯ ಸಚಿವ ಅರೂಪ್ ಬಿಸ್ವಾಸ್, ಜಾದವಪುರದ ಟಿಎಂಸಿ ಅಭ್ಯರ್ಥಿ ಸಯೋನಿ ಘೋಷ್, ಶಾಸಕ ಸೌಕತ್ ಮೊಲ್ಲಾ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಜಾದವಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಭಾಂಗೋರ್‌ನಲ್ಲಿ ಶನಿವಾರ (ಜೂನ್‌ 1) ಮತದಾನ ನಡೆಯಲಿದೆ. ಮತದಾನದ ದಿನದಂದು ಶಾಸಕ ಸೌಕತ್ ಮೊಲ್ಲಾ ತಮ್ಮ ಕೈನಿಂಗ್‌ ಪುರ್ಬಾ ಕ್ಷೇತ್ರದಿಂದ ಹೊರಬಾರದಂತೆ ಚುನಾವಣಾ ಆಯೋಗವು ಆದೇಶಿಸಿದೆ.

ಭಾಂಗೋರ್‌ನ ಇಂಡಿಯನ್ ಸೆಕ್ಯುಲರ್ ಫ್ರಂಟ್‌ (ಐಎಸ್‌ಎಫ್‌) ಶಾಸಕ ನೌಶಾದ್ ಸಿದ್ದಿಕಿ ಈ ಆರೋಪವನ್ನು ನಿರಾಕರಿಸಿದ್ದು, ‘ಸೋಲಿನ ಭಯದಿಂದ ಟಿಎಂಸಿಯು ಇಂತಹ ಕೃತ್ಯ ಎಸಗಿ, ನಮ್ಮ ಮೇಲೆ ದೂರುತ್ತಿದೆ. ಟಿಎಂಸಿ ಕಾರ್ಯಕರ್ತರೇ ನಮ್ಮ ಬೆಂಬಲಿಗರ ಮೇಲೆ ಬಾಂಬ್‌ಗಳನ್ನು ಎಸೆದಿದ್ದಾರೆ. ಆದರೆ ಈ ಸಂದರ್ಭ ಅವರೇ ಗಾಯಗೊಂಡಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT