ನವದೆಹಲಿ: ‘ಮೋದಿ ಸರ್ಕಾರಕ್ಕೆ ಬಂಡವಾಳಶಾಹಿಗಳು ಆಪ್ತ ಸ್ನೇಹಿತರಾಗಿದ್ದರೆ, ಪ್ರತಿಭಟನನಿರತ ರೈತರು ಖಲಿಸ್ತಾನಿಗಳಾಗಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕೃಷಿಗೆ ಸಂಬಂಧಿಸಿದ ಮೂರು ಹೊಸ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯ ಗಡಿಯಲ್ಲಿ ಸಾವಿರಾರು ರೈತರು ಎರಡು ವಾರಕ್ಕೂ ಹೆಚ್ಚು ಕಾಲದಿಂದ ಪ್ರತಿಭಟನೆ ನಡೆಸುತ್ತಿರುವ ಸಮಯದಲ್ಲಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

‘ಮೋದಿ ಸರ್ಕಾರವು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ವಿದ್ಯಾರ್ಥಿಗಳನ್ನು ರಾಷ್ಟ್ರ ವಿರೋಧಿಗಳೆಂದು, ಧ್ವನಿಯೆತ್ತುವ ನಾಗರಿಕರನ್ನು ನಗರ ನಕ್ಸಲರೆಂದೂ, ವಲಸೆ ಕಾರ್ಮಿಕರನ್ನು ಕೋವಿಡ್ ವಾಹಕಗಳೆಂದೂ ಕರೆಯುತ್ತಿದೆ. ಆದರೆ ಅತ್ಯಾಚಾರಕ್ಕೊಳಗಾದ ಯಾರೂ ಅವರಿಗೆ ಕಾಣುತ್ತಿಲ್ಲ. ಪ್ರತಿಭಟಿಸುವ ರೈತರಿಗೆ ಖಲಿಸ್ತಾನಿಗಳು ಎಂದು ಪಟ್ಟಕಟ್ಟುವ ಸರ್ಕಾರಕ್ಕೆ ಬಂಡವಾಳಶಾಯಿಗಳೇ ಆಪ್ತ ಗೆಳೆಯರಾಗಿದ್ದಾರೆ’ ಎಂದು ಅವರು ಟ್ವೀಟ್ ಮಾಡಿಹರಿಹಾಯ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.