ಪಾಕಿಸ್ತಾನದ ಕಳ್ಳಾಟ ಬಿಚ್ಚಿಡುತ್ತೇವೆ: ಝಾ
ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪಾಕಿಸ್ತಾನದ ಮಾತನ್ನು ಭಾರತ ನಂಬಿದ್ದಾಗಲೆಲ್ಲಾ ಅದು ಕಳ್ಳಾಟ ಆಡಿದೆ. ಕಳ್ಳನೊಬ್ಬ ತನ್ನ ಅಪರಾಧವನ್ನು ತನಿಖೆ ನಡೆಸುವಂತೆ ಕೇಳುವ ರೀತಿಯಲ್ಲಿ ಅದು ಕೇಳುತ್ತದೆ. ಇದೆಲ್ಲ ಸಾಕಾಗಿದೆ ಎನ್ನುವ ಸಂದೇಶವನ್ನು ನಾವು ವಿಶ್ವ ನಾಯಕರಿಗೆ ನೀಡಲಿದ್ದೇವೆ’ ಎಂದು ಜೆಡಿಯು ನಾಯಕ ಸಂಜಯ್ ಝಾ ಹೇಳಿದರು. ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ಮತ್ತು ಆಫ್ರಿಕಾದ ಕೆಲವು ದೇಶಗಳಿಗೆ ಭೇಟಿ ನೀಡಲಿರುವ ನಿಯೋಗ ಮುನ್ನಡೆಸುತ್ತಿರುವ ಶಿವಸೇನಾ ನಾಯಕ ಶ್ರೀಕಾಂತ್ ಶಿಂಧೆ ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಸಂಘಟನೆಗಳ ಜತೆಗೆ ಪಾಕಿಸ್ತಾನ ಹೊಂದಿರುವ ಸಂಬಂಧವನ್ನು ವಿಶ್ವನಾಯಕರ ಎದುರು ಎತ್ತಿ ತೋರಿಸಲಿದ್ದೇವೆ ಎಂದು ಹೇಳಿದರು.