ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಸೈಬರ್ ಅಪರಾಧ ಜಾಲದೊಂದಿಗೆ ನಂಟು ಹೊಂದಿದ್ದ ನಾಲ್ವರ ಬಂಧನ

Published 11 ಡಿಸೆಂಬರ್ 2023, 3:02 IST
Last Updated 11 ಡಿಸೆಂಬರ್ 2023, 3:02 IST
ಅಕ್ಷರ ಗಾತ್ರ

ಹಝಾರಿಬಾಗ್‌ (ಜಾರ್ಖಂಡ್‌): ಪಾಕಿಸ್ತಾನದೊಂದಿಗೆ ಸಂಪರ್ಕಹೊಂದಿರುವ ಸೈಬರ್‌ ಅಪರಾಧ ಜಾಲದೊಂದಿಗೆ ನಂಟು ಹೊಂದಿದ್ದ ನಾಲ್ಕು ಮಂದಿಯನ್ನು ಜಿಲ್ಲೆಯಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧಿತರು ರಾಜಧಾನಿ ರಾಂಚಿಯಿಂದ 105 ಕಿ.ಮೀ ದೂರದಲ್ಲಿರುವ ಕೊರ್ರಾ ಪ್ರದೇಶದಲ್ಲಿ ಸೆರೆಯಾಗಿದ್ದಾರೆ. ಈ ಗುಂಪು ಪಂಜಾಬ್‌ನಲ್ಲಿ ವ್ಯಕ್ತಿಯೊಬ್ಬರಿಗೆ ₹ 1.63 ಲಕ್ಷ ವಂಚಿಸಿತ್ತು. ಆದರೆ, ಅದಕ್ಕಾಗಿ ಬಳಸಿದ್ದ ಮೊಬೈಲ್‌ ಸಂಖ್ಯೆಯು ಜಾರ್ಖಂಡ್‌ ಪ್ರದೇಶದೊಂದಿಗೆ ಸಂಪರ್ಕ ಹೊಂದಿರುವುದು ಕಂಡುಬಂದಿತ್ತು.

ಕಾರ್ಯಾಚರಣೆ ನಡೆಸಿದ ತನಿಖಾ ತಂಡ, ಬಂಧಿತರಿಂದ ಒಂದು ಕಾರು, ಎರಡು ದ್ವಿಚಕ್ರವಾಹನಗಳು, 10 ಮೊಬೈಲ್‌ ಫೋನ್‌ಗಳು, 36 ಸಿಮ್‌ ಕಾರ್ಡ್‌ಗಳು, 37 ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ಗಳು, 12 ಪಾಸ್‌ ಪುಸ್ತಕ ಮತ್ತು ಚೆಕ್‌ ಪುಸ್ತಕಗಳನ್ನು ವಶಕ್ಕೆ ಪಡೆದಿದೆ.

ವಿಚಾರಣೆ ವೇಳೆ ಅವರೆಲ್ಲ ಪಾಕಿಸ್ತಾನ ಮೂಲದ ವ್ಯಕ್ತಿಯ ನಿರ್ದೇಶನದಂತೆ ಕಾರ್ಯಾಚರಣೆ ನಡೆಸುತ್ತಿದ್ದುದಾಗಿ ಹೇಳಿಕೆ ನೀಡಿದ್ದಾರೆ ಎಂದು ಹಝಾರಿಬಾಗ್‌ ಎಸ್‌ಪಿ ಮನೋಜ್‌ ರತನ್‌ ಚೋತೆ ತಿಳಿಸಿದ್ದಾರೆ.

'ಇದು ಗಂಭೀರ ಪ್ರಕರಣವಾಗಿದೆ. ವಂಚನೆ ಮೂಲಕ ಗಳಿಸಿದ ಹಣವನ್ನು ಸೈಬರ್‌ ಅಪರಾಧಗಳಿಗೆ ಅಥವಾ ದೇಶದ ಹಿತಾಸಕ್ತಿಗೆ ವಿರುದ್ಧವಾದ ಕೃತ್ಯಗಳಿಗೆ ಬಳಸುವ ಯೋಜನೆಗಳೇನಾದರೂ ಇವೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ' ಎಂದಿದ್ದಾರೆ.

'ಪಂಜಾಬ್‌ನಲ್ಲಿ ನವೆಂಬರ್‌ 28ರಂದು ಆನ್‌ಲೈನ್‌ ವಂಚನೆ ಪ್ರಕರಣ ನಡೆದಿತ್ತು. ವಂಚನೆಗೆ ಬಳಸಿದ್ದ ಮೊಬೈಲ್‌ ಸಂಖ್ಯೆಯು ಕೊರ್ರಾದಲ್ಲಿ ಸಕ್ರಿಯವಾಗಿರುವುದು ಪತ್ತೆಯಾಗಿತ್ತು. ಅದರಂತೆ ತಂಡ ರಚಿಸಿ, ಕಾರ್ಯಾಚರಣೆ ಆರಂಭಿಸಿದೆವು. ಮೊದಲು ಇಬ್ಬರನ್ನು ಬಂಧಿಸಿದೆವು. ಅವರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಇನ್ನಿಬ್ಬರನ್ನು ಬಂಧಿಸಲಾಯಿತು' ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT