ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ ಚುನಾವಣೆಯಲ್ಲಿ BJPಗೆ ಅಡ್ಡಮತದಾನ ಮಾಡಿದ SPಶಾಸಕರಿಗೆ Y ಕೆಟಗರಿ ಭದ್ರತೆ

Published 24 ಮಾರ್ಚ್ 2024, 7:38 IST
Last Updated 24 ಮಾರ್ಚ್ 2024, 7:38 IST
ಅಕ್ಷರ ಗಾತ್ರ

ಲಖನೌ: ಫೆ.27ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಅಡ್ಡಮತದಾನ ಮಾಡಿದ ಸಮಾಜವಾದಿ ಪಕ್ಷದ 4 ಶಾಸಕರಿಗೆ ‘ವೈ ಕೆಟಗರಿ’ ಭದ್ರತೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಅಭಯ್ ಸಿಂಗ್‌ (ಗೋಸಾಯ್‌ಗಂಜ್‌), ಮನೋಜ್ ಕುಮಾರ್ ಪಾಂಡೆ (ಉಂಚಹರ್), ರಾಕೇಶ್ ಪ್ರತಾಪ್‌ ಸಿಂಗ್‌ (ಗೌರಿಗಂಜ್‌) ಹಾಗೂ ವಿನೋದ್ ಚತುರ್ವೇದಿ (ಕಲ್ಪಿ) ಅವರಿಗೆ ವೈ ಕೆಟಗರಿ ಭದ್ರತೆ ಕಲ್ಪಿಸಲಾಗಿದೆ.

ವೈ ಕೆಟಗರಿ ಭದ್ರತೆ ಹೊಂದಿರುವ ಶಾಸಕರಿಗೆ 8 ಸಿಆರ್‌ಪಿಎಫ್‌ ಯೋಧರು ಭದ್ರತೆ ನೀಡಲಿದ್ದಾರೆ. ಐವರು ಮನೆಗೆ ಭದ್ರತೆ ನೀಡಿದರೆ, ಉಳಿದ ಮೂವರು ಅವರೊಂದಿಗೆ ಸಂಚರಿಸಲಿದ್ದಾರೆ.

ಅಜಯ್‌ ಸಿಂಗ್‌ ಅವರಿಗೆ ಶುಕ್ರವಾರವೇ ಭದ್ರತೆ ಕಲ್ಪಿಸಲಾಗಿದ್ದು, ಉಳಿದವರಿಗೆ ಶನಿವಾರದಿಂದ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌, ಪ್ಯಾಕೇಜ್‌ಗಾಗಿ ಬಿಜೆಪಿ ಸೇರಿದರು. ಈಗ ಅವರಿಗೆ ಭದ್ರತೆ ಲಭಿಸಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT