ಔರಂಗಾಬಾದ್: ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಇನ್ನಿಬ್ಬರ ವಿರುದ್ಧ ಸಿಟಿ ಚೌಕ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಡ್ಯಾನಿಷ್ ಟೂರ್ಸ್ ಮತ್ತು ಟ್ರಾವೆಲ್ಸ್ನ ಮಾಲೀಕ ಶಹಾಬ್ ದೂರು ದಾಖಲಿಸಿದ್ದಾರೆ.
₹100 ಕೋಟಿ ಮಾನನಷ್ಟ ಮೊಕದ್ದಮೆ:ಈ ಆರೋಪವನ್ನು ಅಜರುದ್ದೀನ್ ನಿರಾಕರಿಸಿದ್ದು, ‘ದೂರುದಾರನ ವಿರುದ್ಧ ಮಾನ ನಷ್ಟ ಮೊಕದ್ದಮೆ ದಾಖಲಿಸಿ, ₹100 ಕೋಟಿ ಪರಿಹಾರ ಕೇಳಲಾಗುವುದು’ ಎಂದರು.
‘ಅಜರುದ್ದೀನ್ ಸಹಾಯಕ ಮುಜೀಬ್ ಖಾನ್ ಅವರ ಮನವಿ ಮೇರೆಗೆ ಹಲವು ಅಂತರರಾಷ್ಟ್ರೀಯ ವಿಮಾನಗಳಲ್ಲಿ ಸೀಟು ಕಾಯ್ದಿರಿಸಲಾಗಿತ್ತು. ಇದರ ಮೌಲ್ಯ ₹20.96 ಲಕ್ಷವಾಗಿತ್ತು. ಇಲ್ಲಿಯವರೆಗೂ ಈ ಹಣ ಪಾವತಿಸಿಲ್ಲ’ ಎಂದು ಶಹಾಬ್ ಆರೋಪಿಸಿದ್ದಾರೆ.