ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮುಂಬೈನಲ್ಲಿ ಭೇಟಿಯಾಗಲಿದ್ದಾರೆ. ಭಾರತ ಹಾಗೂ ಫ್ರಾನ್ಸ್ ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಆಗಿರುವ ಪ್ರಗತಿ ಬಗ್ಗೆ ಉಭಯ ನಾಯಕರು ಅವಲೋಕನ ನಡೆಸಲಿದ್ದಾರೆ.
.ಗ್ರೀನ್ಲ್ಯಾಂಡ್ ಮೇಲೆ ಟ್ರಂಪ್ ಕಣ್ಣು: ಆರ್ಥಿಕ ಸಂಬಂಧಕ್ಕೆ ಪೆಟ್ಟು ಎಂದ ಫ್ರಾನ್ಸ್.
ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವುದು ಹಾಗೂ ಹೊಸ ವಲಯಗಳಲ್ಲಿ ಅವುಗಳನ್ನು ವಿಸ್ತರಿಸುವುದರ ಬಗ್ಗೆ ಚರ್ಚೆ ನಡೆಯಲಿದೆ.ಪ್ರಾದೇಶಿಕ ಹಾಗೂ ಜಾಗತಿಕ ಮಹತ್ವದ ಮಾಹಿತಿಗಳ ಬಗ್ಗೆ ಇಬ್ಬರು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ.

ಭಾರತ ಆತಿಥ್ಯದಲ್ಲಿ ನಡೆಯುವ ಎ.ಐ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಆಹ್ವಾನ ಮೇರೆಗೆ ಮ್ಯಾಕ್ರನ್ ಅವರು ಫೆ. 17ರಿಂದ 19ರವರೆಗೆ ಭಾರತ ಪ್ರವಾಸದಲ್ಲಿ ಇರಲಿದ್ದಾರೆ. ಭಾರತದೊಂದಿಗೆ ದ್ವಿಪಕ್ಷೀಯ ಸಮಾವೇಶದಲ್ಲೂ ಅವರು ಭಾಗಿಯಾಗಲಿದ್ದಾರೆ.
.ಭಾರತ–ಫ್ರಾನ್ಸ್ ಪಾಲುದಾರಿಕೆಗೆ ಬಲ: ಫ್ರಾನ್ಸ್ ಅಧ್ಯಕ್ಷರ ಜೊತೆ ಜೈಶಂಕರ್ ಮಾತು.
ಇದು ಭಾರತಕ್ಕೆ ಮ್ಯಾಕ್ರನ್ ಅವರ ನಾಲ್ಕನೇ ಭೇಟಿಯಾಗಿದ್ದು, ಇದೇ ಮೊದಲ ಬಾರಿ ಮುಂಬೈಗೆ ಬರಲಿದ್ದಾರೆ.

ಫೆ. 17ರಂದು ಸಂಜೆ ಸುಮಾರು 3.15ರ ವೇಳೆಗೆ ಮುಂಬೈನಲ್ಲಿರುವ ಮಹಾರಾಷ್ಟ್ರ ಲೋಕಭವನದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಸಂಜೆ 5.15 ಉಭಯ ನಾಯಕರು ಭಾರತ–ಫ್ರಾನ್ಸ್ ಇಯರ್ ಆಫ್ ಇನ್ನೊವೇಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ.
.ಭಾರತ-ಫ್ರಾನ್ಸ್ ಸ್ನೇಹ ಚಿರಾಯುವಾಗಲಿ: ಇಮ್ಯಾನುಯೆಲ್ ಮ್ಯಾಕ್ರನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.