ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಸಹಿತ ಗಗನಯಾನ ಪರೀಕ್ಷಾ ಉಡಾವಣೆ: ಕೊನೆ ಕ್ಷಣದಲ್ಲಿ 30 ನಿಮಿಷ ಮುಂದೂಡಿಕೆ

Published 21 ಅಕ್ಟೋಬರ್ 2023, 2:51 IST
Last Updated 21 ಅಕ್ಟೋಬರ್ 2023, 2:51 IST
ಅಕ್ಷರ ಗಾತ್ರ

ಶ್ರೀಹರಿಕೋಟ: ಮಾನವ ಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ನಡೆಯುವ ಸರಣಿ ಪರೀಕ್ಷೆಗಳ ಪೈಕಿ ಇಂದು (ಶನಿವಾರ, ಅಕ್ಟೋಬರ್ 21ರಂದು) ನಡೆಯಲಿರುವ ಮೊದಲ ಪರೀಕ್ಷಾ ಉಡಾವಣೆ ಸಮಯವನ್ನು ಕೊನೆ ಕ್ಷಣದಲ್ಲಿ 30 ನಿಮಿಷ ಮುಂದೂಡಲಾಗಿದೆ.

ಪರೀಕ್ಷಾ ವಾಹನ ಡಿ1 ಮಿಷನ್‌ (ಡೆವಲಪ್‌ಮೆಂಟ್‌ ಫ್ಲೈಟ್‌ ಮಿಷನ್‌–1) ಉಡಾವಣೆಯನ್ನು ಬೆಳಿಗ್ಗೆ 8ಕ್ಕೆ ನಿಗದಿಯಾಗಿತ್ತು.

'ಉಡಾವಣೆ ಸಮಯವನ್ನು ಬೆಳಿಗ್ಗೆ 8.30ಕ್ಕೆ ಮರುನಿಗದಿಪಡಿಸಲಾಗಿದೆ' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಎಕ್ಸ್‌ ಖಾತೆಯಲ್ಲಿ ಪ್ರಕಟಿಸಿದೆ.

ಸಮಯ ಬದಲಾವಣೆಗೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಮಳೆ ಅಥವಾ ಮೋಡ ಕವಿದ ವಾತಾವರಣ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT